ಜೀವನವನ್ನು ಭದ್ರವಾಗಿಸಲು ಆಸಕ್ತ ಕ್ಷೇತ್ರದ ಬದ್ಧತೆ ಸಾಕು’ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾರ್ಷಿಕೋತ್ಸವದಲ್ಲಿ ರೊನಾಲ್ಡ್ ಡಿ’ಸೋಜಾ

ಜೀವನವನ್ನು ಭದ್ರವಾಗಿಸಲು ಆಸಕ್ತ ಕ್ಷೇತ್ರದ ಬದ್ಧತೆ ಸಾಕು’ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾರ್ಷಿಕೋತ್ಸವದಲ್ಲಿ ರೊನಾಲ್ಡ್ ಡಿ’ಸೋಜಾ
Facebook
Twitter
LinkedIn
WhatsApp

‘ ಬೆಳ್ತಂಗಡಿ: ಜೀವನವನ್ನು ಭದ್ರವಾಗಿಸಿಕೊಳ್ಳಲು ದೊಡ್ಡ ದೊಡ್ಡ ಪದವಿಗಳು ಬೇಕಾಗಿಲ್ಲ; ಹಸಿವಿನ ಅರಿವು, ಆಸಕ್ತಿಯ ಕ್ಷೇತ್ರದಲ್ಲಿನ ಬದ್ಧತೆ ಮತ್ತು ಅಂತರಂಗದಲ್ಲಿರುವ ನಾಯಕತ್ವ ಗುಣವನ್ನು ಜಾಗೃತಗೊಳಿಸಿಕೊಳ್ಳುವ ಮನಸ್ಸು ಇದ್ದರೆ ಸಾಕು ಎಂಬುದಾಗಿ ಲೆಕ್ಸಾ ಲೈಟಿಂಗ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯನಿರ್ವಾಹಕ ನಿರ್ದೇಶಕರಾದ ರೊನಾಲ್ಡ್ ಡಿ’ಸೋಜಾ ಹೇಳಿದರು.ಅವರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೆ| ಡಾ| ಸ್ಟ್ಯಾನಿ ಗೋವಿಯಸ್ ಮಾತನಾಡಿ; ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುತ್ತವೆ. ಹಾಗಾಗಿ ಪಠ್ಯದ ಜೊತೆ ಜೊತೆಗೆ ಇತರ ಆಸಕ್ತಿಗಳಿಗೂ ಇಂಬು ಕೊಡಬೇಕು ಎಂದರು. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಲಿರುವ ಡಾ. ಈಶ್ವರಗೌಡ ಮತ್ತು ಕಚೇರಿ ಸಿಬ್ಬಂದಿಗಳಾದ ಅಪೋಲಿನ್ ಸೆರಾವೋ, ಫೆಡ್ರಿಕ್, ಮಾರ್ಸೆಲ್ ಬಿ.ಎಸ್. ಡಿ’ಸೋಜಾ ಇವರಿಗೆ ಬೀಳ್ಕೊಡುಗೆ ಏರ್ಪಡಿಸಲಾಗಿತ್ತು.ಕಳೆದ ಶೈಕ್ಷಣಿಕ ವರ್ಷದಲ್ಲಿ ಎಂ.ಕಾಂ. ವಿಭಾಗದಲ್ಲಿ ಏಳನೇ ರಾಂಕ್ ಪಡೆದ ಭಾರ್ಗವಿ ಯು.ಎಸ್. ಮತ್ತು ಉಪನ್ಯಾಸಕ ಸಾಧಕರಾದ ಲೆಫ್ಟಿನೆಂಟ್ ಆಲ್ವಿನ್ ಕೆ.ಜಿ. ಮತ್ತು ಪ್ರಶಾಂತ್ ಎಂ. ಇವರನ್ನು ಸಮ್ಮಾನಿಸಲಾಯಿತುಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಲೆಕ್ಸ್ ಐವನ್ ಸಿಕ್ವೇರಾ ಅವರು ನಿವೃತ್ತರಿಗೆ ಅಭಿನಂದನೆಯ ಮಾತುಗಳನ್ನಾಡಿದರು. ಅಭಿನಂದಿತರ ಪರವಾಗಿ ಡಾ. ಈಶ್ವರ ಗೌಡ ಅವರು ಸಂಸ್ಥೆಯಲ್ಲಿ ತಮಗೆ ಸಹರಿಸಿದವರೆಲ್ಲನ್ನು ನೆನಪಿಸಿಕೊಂಡರು.ಐಕ್ಯೂಎಸಿ ಸಂಯೋಜಕರಾದ ರಾಬಿನ್ ಸೇರಾ ವರದಿ ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಅಲ್ಬರ್ಟ್ ಮೊರಾಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿಲ್ಸನ್ ರೂಪೇಶ್ ಮೊರಾಸ್, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ನೆಲ್ಸನ್ ಲಸ್ರಾದೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರಕಾಶ್ ಡಿ’ಸೋಜ ವಂದಿಸಿದರು. ಉಪನ್ಯಾಸಕರಾದ ನೆಲ್ಸನ್ ಮೋನಿಸ್ ಮತ್ತು ರಾಜೇಶ್ವರಿ ಎಂ. ಕಾರ್ಯಕ್ರಮ ನಿರೂಪಿಸಿದರು.

Latest News

Related Posts