ಮುಂಡೂರು ಬಿಲ್ಲವ ಸಂಘದಿಂದ ಆಹಾರ ಸಾಮಾಗ್ರಿ ಕಿಟ್ ವಿತರಣೆ ಮಾಸ್ಕ್ ದರಿಸಿ ವೈಯಕ್ತಿಕ ಅಂತರ ಕಾಪಾಡಿ ಮಾದರಿಯಾದರಿವರು

Facebook
Twitter
LinkedIn
WhatsApp

ಮುಂಡೂರು: ಕೋವಿಡ್-19 ಕೊರೋನಾ ಸೋಂಕನ್ನು ತಡೆಗಟ್ಟಲು ಸರಕಾರ ಲಾಕ್‍ಡೌನ್ ಮಾಡಿರುವ ಹಿನ್ನಲೆಯಲ್ಲಿ ಮುಂಡೂರು ಗ್ರಾಮದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ ಮುಂಡೂರು ಇವುಗಳ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳು ಸಾರಿದ ಒಂದೇ ಜಾತಿ-ಒಂದೇ ಮತ-ಒಂದೇ ದೇವರು ಎಂಬ ತತ್ವದಂತೆ ಗ್ರಾಮದಲ್ಲಿರುವ ಬಿಲ್ಲವ ಕುಟುಂಬ ಹಾಗೂ ಇತರ ವರ್ಗದ ಎಲ್ಲಾ ಧರ್ಮಗಳಲ್ಲಿರುವ ತೀರಾ ಹಿಂದುಳಿದ ಬಡತನದಲ್ಲಿರುವ ಕುಟುಂಬಗಳನ್ನು ಗುರುತಿಸಿ 52 ಕುಟುಂಗಳಿಗೆ ದಿನ ಬಳಕೆಯ ಆಹಾರ ಸಾಮಾಗ್ರಿ ಕಿಟ್‍ಗಳನ್ನು ಮುಂಡೂರು ಗ್ರಾಮದಲ್ಲಿ ಇತ್ತೀಚೆಗೆ ಮನೆ ಮನೆಗೆ ಸಂಪರ್ಕಿಸಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮುಂಡೂರು ಇದರ ಅಧ್ಯಕ್ಷರಾದ ರಮಾನಂದ ಸಾಲಿಯಾನ್ ಮುಂಡೂರು ಮಾತನಾಡಿ ಗ್ರಾಮದಲ್ಲಿ ಎಲ್ಲಾ ವರ್ಗದಲ್ಲಿರುವ ತೀರಾ ಬಡವರನ್ನು ಗುರುತಿಸಿ ಈ ಕಿಟ್‍ಗಳನ್ನು ನೀಡುತ್ತಿದ್ದು, ಈ ಕಿಟ್ ವಿತರಣೆ ನಡೆಸಲು ಆರ್ಥಿಕ ಸಹಾಯ ನೀಡಿದ ದಾನಿಗಳಾದ ಬಿಲ್ಲವ ಬಂಧುಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡಕ್ಕಾಲು, ಬಿಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಸವಿತಾ ಪನೆತ್ತಗುರಿ, ಮಾಜಿ ಅಧ್ಯಕ್ಷರುಗಳಾದ ರಾಜೀವ ಸಾಲಿಯಾನ್, ನೀತಾ ಮಹೇಶ್ ಕುಮಾರ್ ನಡಕ್ಕರ, ಅನಿತಾ ಗುರುವಪ್ಪ ಪೂಜಾರಿ, ಜಯರಾಜ್ ನಡಕ್ಕರ, ಸಂಘದ ಪದಾಧಿಕಾರಿಗಳಾದ ವಸಂತ ಪೂಜಾರಿ ನಾನಿಲ್ತ್ಯಾರು, ಮನೋಜ್ ಕುಮಾರ್ ಕೊಡಕ್ಕಾಲು, ಪ್ರಸನ್ನ ಎಂ. ಚೆನ್ನಪ್ಪ ಬಂಗೇರಾ, ಸುಧಾ ಹರಿಶ್ಚಂದ್ರ ಬಳ್ಳಿದಡ್ಡ, ಸಂತೋಷ್ ಕುಮಾರ್ ಮೇಗಿನ ಕಿನಿಂಜೆ, ಹರೀಶ್ ಕುದ್ಕೋಳಿ ಉಪಸ್ಥಿತರಿದ್ದರು. ಕಿಟ್ ವಿತರಿಸಿದ ನಂತರ ಕೊನೆಯಲ್ಲಿ ಅಶೋಕ್ ಕುಮಾರ್ ವಂದಿಸಿದರು.

Latest News

Related Posts