ವೈಯಕ್ತಿಕ ಅಂತರ ಇದ್ದರೆ ಸಾಲದಣ್ಣಾ….ಮಾಸ್ಕ್ ಧಾರಣೆ ಕಡ್ಡಾಯವಣ್ಣಾ….

Facebook
Twitter
LinkedIn
WhatsApp

ದೇಣಿಗೆ ನೀಡುವಾಗಲೂ ಕೊರೋನಾ ಸೋಂಕಿನ ವಿರುದ್ಧ ಮುಂಜಾಗ್ರತೆ ಅಗತ್ಯ

ಪುದುವೆಟ್ಟುವಿನ ಬಾರಾಳಿಯ ಶ್ರೀ ಗುರುನಾರಾಯಣ ಬಿಲ್ಲವ ಸಂಘದಿಂದ ಮುಖ್ಯಮಂತ್ರಿ ಪರಿಹಾರ ನಿಧಿ ಕೋವಿಡ್-19ಗೆ 25,000ರೂಪಾಯಿಗಳ ಚಕ್ ನೀಡಿದರು. ಇದು ಸತ್ಕಾರ್ಯ; ಸರ್ವಶಕ್ತ ಮೆಚ್ಚುವ ಕೆಲಸ. ಆದರೆ ಸರಕಾರವೇ ಕೊರೋನಾ ಸೋಂಕು ಹರಡದಂತೆ ಸೂಚಿಸಿದ ಮುಂಜಾಗ್ರತಾ ಕ್ರಮ‌ ಕೈಗೊಳ್ಳದೇ ಪರಿಹಾರ ಧನ ನೀಡಿದ ಮಾತ್ರಕ್ಕೆ ಕೊರೋನಾ ಸೋಂಕಿನಿಂದ ಪಾರಾಗಲು ಅಸಾಧ್ಯ. ಶಾಸಕರು ಹಾಗೂ ಸಂಘಟನೆಯ ಪದಾಧಿಕಾರಿಗಳು ಈ ವಿಚಾರದತ್ತ ಗಮನ ಹರಿಸಬೇಕಿತ್ತು. ವೈಯಕ್ತಿಕ ಅಂತರ ಕಾಪಾಡಿಕೊಂಡ ಇವರುಗಳು ಮಾಸ್ಕ್ ಧರಿಸದೇ ಎಡವಟ್ಟು ಮಾಡಿಕೊಂಡಂತಿದೆ.
ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಶಾಸಕ ಹರೀಶ್ ಪೂಂಜಾರಿಗೆ ಪುದುವೆಟ್ಟು ಬಾರಾಳಿ ಶ್ರೀ ಗುರುನಾರಾಯಣ ಬಿಲ್ಲವ ಸಂಘದ ಅಧ್ಯಕ್ಷ ಮನೋಜ್ ಹೇರಳಿಕೆ, ಕಾರ್ಯದರ್ಶಿ ರಾಜೇಶ್, ಪದಾಧಿಕಾರಿಗಳಾದ ರಾಧಾಕೃಷ್ಣ ಕರಂಬಾರು ಮತ್ತು ರಂಗನಾಥ ಪಿಲತ್ತೇರಿ 25,000ರೂಪಾಯಿಗಳ ಪರಿಹಾರ ನಿಧಿಯ ಚೆಕ್ ಹಸ್ತಾಂತರಿಸಿದರು.

Latest News

Related Posts