ಕೊರೋನಾ ಸೋಂಕು ಹರಡುವಿಕೆ ತಡೆಗೆ ಸದ್ಯಕ್ಕೆ ಮುಂಜಾಗ್ರತೆಯೊಂದೇ ಪರಿಹಾರ. ಈ ಸತ್ಯವನ್ನರಿತ ಬೆಳ್ತಂಗಡಿ ರೋಟರಿ ಕ್ಲಬ್, ಮುಂಜಾಗ್ರತೆಗೆ ತನ್ನಿಂದಾದ ಸಹಕಾರ ನೀಡುತ್ತಿದೆ. ಮಾಸ್ಕ್ ಧಾರಣೆ ಹಾಗೂ ವೈಯಕ್ತಿಕ ಅಂತರ ಕಾಪಾಡುವುದು ಪ್ರತಿಯೊಬ್ಬರ ವೈಯಕ್ತಿಕ ಜವಾಬ್ದಾರಿ. ಈ ವಿಚಾರದಲ್ಲಿ ಅರಿವನ್ನು ಮೂಡಿಸುವುದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲೂ ವೈಯಕ್ತಿಕ ಸ್ವಚ್ಛತೆ ಕಾಪಾಡುವ ಉದ್ಧೇಶದಿಂದ ಸ್ಯಾನಿಟೈಜರ್ ಸ್ಟ್ಯಾಂಡನ್ನು ನೀಡುವ ಯೋಜನೆ ಹಮ್ಮಿಕೊಂಡಿದೆ.
ಬೆಳ್ತಂಗಡಿ ರೋಟರಿ ಕ್ಲಬ್ಬಿನ ವತಿಯಿಂದ ಈಗಾಗಲೇ ಬೆಳ್ತಂಗಡಿ ಪತ್ರಕರ್ತರ ಸಂಘ ಹಾಗೂ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಸ್ಟ್ಯಾಂಡನ್ನು ಕೊಡುಗೆಯಾಗಿ ನೀಡಿದ್ದು,; ಮೇ 7ರಂದು ಲಾಯ್ಲ ಗ್ರಾಮ ಪಂಚಾಯತ್ ಕಛೇರಿಗೆ ಸ್ಯಸನಿಟೈಸರ್ ಸ್ಟ್ಯಾಂಡನ್ನು ನೀಡಲಾಯಿತು. ಬೆಳ್ತಂಗಡಿ ರೋಟರಿ ಕ್ಲಬ್ಬಿನ ಸದಸ್ಯರಾದ ವೈಕುಂಠ ಪ್ರಭು, ಧನಂಜಯ ರಾವ್ ಬಿ. ಕೆ., ಯೋಗೀಶ್ ಭಿಡೆ, ಲಾಯ್ಲ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ರಾವ್, ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಸದಸ್ಯರಾದ ದಿನೇಶ್ ಕುಮಾರ್, ಪ್ರಾನ್ಸಿಸ್ ಡಿ’ಸೋಜಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣರಾಜ, ಪಂಚಾಯತ್ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.







