ಮೇಷ:ಮೇಷ: ಆರೋಗ್ಯದ ಬಗ್ಗೆ ಎಚ್ಚರವಹಿಸಿ, ಬಂಧುಮಿತ್ರರ ನೆವನದಿಂದ ಆರ್ಥಿಕವಾಗಿ ಹಿನ್ನಡೆ, ಲಕ್ಷ್ಮೀ ಸ್ತೋತ್ರ ಪಠಿಸಿ, ವಾರಾಂತ್ಯದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸುವುದು. ಶುಭ ಸಂಖ್ಯೆ-1.ವೃಷಭ: ನೆರೆಹೊರೆಯವರಲ್ಲಿ ಕಲಹ ಉಂಟಾಗುವ ಸಂದರ್ಬ ಬರಬಹುದು, ಮನೆಯಾಕೆಯ ಸಲಹೆಯಿಂದ ಆತಂಕ ದೂರವಾದೀತು. ಮನೆಗೆ ಸ್ನೇಹಿತರ ಆಗಮನದಿಂದ ಸಂತಸ. , ಶುಭ ಸಂಖ್ಯೆ- 6.ಮಿಥುನ: ವೈರಿಗಳೊಂದಿಗೆ ವ್ಯರ್ಥ ಹೋರಾಟ ಸಂಭವಸೀತು, ಮನೆ ಮಂದಿಯಿಂದ ಸಾಂತ್ವನ, ಆರೋಗ್ಯದ ಬಗ್ಗೆ ಎಚ್ಚರವಿರಲಿ. ಶಿವ ಸ್ತೋತ್ರ ಪಠಿಸಿ. ಶುಭ ಸಂಖ್ಯೆ- 3.ಕರ್ಕಾಟಕ: ಶತ್ರುಗಳಿಗೆ ಹಿನ್ನಡೆ, ನಿಮ್ಮ ಕಾರ್ಯವೈಖರಿಯಿಂದ ಗೆಳೆಯರಿಗೆ ಸಹಾಯ, ಕೃಷಿ ವ್ಯವಹಾರಗಳಲ್ಲಿ ಗೆಲುವು. ಶುಭ ಸಂಖ್ಯೆ-10.ಸಿಂಹ;ಬಂಧುಗಳಿಗೆ ಅನಾರೋಗ್ಯ ಕಾರಣ ಆರ್ಥಿಕ ವೆಚ್ಚ ಕಂಡುಬರಬಹುದು, ನೌಕರಿಯಲ್ಲಿ ಭಡ್ತಿ ಸಂಭವ. ಶುಭ ಸಂಖ್ಯೆ- 4.ಕನ್ಯಾ: ಅಧಿಕಾರಿ ವರ್ಗದಿಂದ ಕಠಿಣ ಮಾತುಗಳನ್ನು ಕೇಳಬೇಕಾದೀತು, ಮಡದಿ ಮಕ್ಕಳಿಂದ ಸಾಂತ್ವನ, ಭೋಗ ವಸ್ತುಗಳ ಬಗ್ಗೆ ಆಸಕ್ತಿ ಅಧಿಕವಾದೀತು. ಶುಭ ಸಂಖ್ಯೆ-8.ತುಲಾ: ನೆಮ್ಮದಿ ನಾಶಕ್ಕೆ ಕಾರ್ಯ ವಿಳಂಬ ಕಾರಣವಾದೀತು, ಮನೆಯಾಕೆಗೆ ಅನಾರೋಗ್ಯ, ಮಕ್ಕಳ ಕಿರಿಕಿರಿ ಯಿಂದ ನೆಮ್ಮದಿ ಭಂಗವಾದೀತು, ಆದಿತ್ಯ ಹೃದಯ ಪಾರಾಯಣ ಮಾಡಿ. ಶುಭ ಸಂಖ್ಯೆ-5.ವೃಶ್ಚಿಕ: ಆರ್ಥಿಕ ಸ್ಥಿತಿ ಉತ್ತಮ, ವಾಹನ ಭಯ, ಅನವಶ್ಯಕ ವಿವಾದಕ್ಕೆ ಒಳಗಾಗದಂತೆ ಜಾಗ್ರತೆ ವಹಿಸಿ, ದೂರದ ನೆಂಟರ ಆಗಮನ. ಶುಭ ಸಂಖ್ಯೆ-2.ಧನು: ಅಪರೂಪದ ಅತಿಥಿಯಿಂದ ಕಾರ್ಯಸಾಧನೆಗೆ ಅನುಕೂಲ, ಆರ್ಥಿಕ ಸ್ಥಿತಿ ಹದಗೆಡದಂತೆ ಎಚ್ಚರವಹಿಸಿ, ಶಿವ ಸ್ತೋತ್ರ ಪಠಿಸಿ. ಶುಭ ಸಂಖ್ಯೆ-3.ಮಕರ:ಆರೋಗ್ಯದಲ್ಲಿ ಏರುಪೇರು, ಖರ್ಚು ಅಧಿಕವಾದೀತು, ಕುಟುಂಬದಲ್ಲಿ ವಿರಸದ, ಮಕ್ಕಳಿಗಾಗಿ ಅಧಿಕ ಧನ ವ್ಯಯ. ಶುಭ ಸಂಖ್ಯೆ-4.ಕುಂಭ: ಶತ್ರುನಾಶದಿಂದ ನಿರಾಳ, ಆರ್ಥಿಕ ಸ್ಥಿತಿ ಸುಗಮವಾಗಿರುವುದು. ಪ್ರಯಾಣಕಾಲದಲ್ಲಿ ಎಚ್ಚರವಹಿಸಿ. ಶುಭಸಂಖ್ಯೆ-6.ಮೀನ: ವಿನಾ ಕಾರಣ ವಿವಾದ ಸಂಭವ, ಅಪರಿಚಿತರೊಡನೆ ವ್ಯವಹಾರದಲ್ಲಿ ಎಚ್ಚರವಿರಲಿ, ವಾರಾಂತ್ಯದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣುವಿರಿ. ಶುಭ ಸಂಖ್ಯೆ-9.