ಮಾಸ್ಕ್ ಧರಿಸಿ ವೈಯಕ್ತಿಕ ಅಂತರದ ಬಗ್ಗೆ ಎಚ್ಚರಿಕೆ ವಹಿಸಿದ ಕಾರ್ಯಕ್ರಮ
ರಸ್ತೆ ಅಪಘಾತ ಮತ್ತು ತುರ್ತು ಸಂಧರ್ಭದಲ್ಲಿ ರೋಗಿಯ ಜೀವ ಉಳಿಸಬೇಕೆಂಬ ಉದ್ದೇಶದಿಂದ
ಸೇವಾ ಮನೋಭಾವದಿಂದ ಮಾಡುವ ಕರ್ತವ್ಯ ನಿರ್ವಹಿಸುವ ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ ವಿಧಾನ ಪರಿಷತ್ ಶಾಸಕರಾದ ಕೆ.ಹರೀಶ್ ಕುಮಾರ್ ರವರು ಕೊರೋನಾ ಲಾಕ್ ಡೌನಿನ ಈ ಸಂಧರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿಗಳು ತನ್ನ ಜೀವದ ಹಂಗು ತೊರೆದು ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿದ್ದು; ಇಂತಹ ಅಂಬುಲೆನ್ಸ್ ಚಾಲಕರು ಹಾಗೂ ಸಿಬ್ಬಂದಿಗಳು ನಿಜವಾದ ” ಕೊರೊನಾ ವಾರಿಯರ್ಸ್ “. ನಿಮ್ಮ ಈ ಸೇವೆಗೆ ಸಾರ್ವಜನಿಕರು ನಾವುಗಳೆಲ್ಲರೂ ನಿಮಗೆ ಸದಾ ಚಿರ ಋಣಿಗಳು ಎಂದು ಹೇಳಿದರು..
ಬೆಳ್ತಂಗಡಿ ಸಂತೆಕಟ್ಟೆಯ ಬಳಿಯಿರುವ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಬ್ಯಾಂಕ್ ವಠಾರದಲ್ಲಿ ಖಾಸಗಿ ಮತ್ತು ಸರಕಾರಿ ಆಂಬುಲೆನ್ಸ್ ಚಾಲಕರಿಗೆ ಹಾಗೂ ಅದರ ಸಿಬ್ಬಂದಿಗಳಿಗೆ ತನ್ನ ವೈಯಕ್ತಿಕ ನೆಲೆಯಲ್ಲಿ ನೀಡಿರುವ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ದಲ್ಲಿ ಮಾತನಾಡುತ್ತಾ “ಕೋವಿಡ್ 19 ವೈರಸ್ ವಿರುದ್ದವಾಗಿ ನಿಸ್ವಾರ್ಥವಾಗಿ ಸೇವೆ ಮಾಡುವ ವೈದ್ಯರು ಮತ್ತು ದಾದಿಯರಷ್ಟೇ ಆಂಬ್ಯುಲೆನ್ಸ್ ಸಿಬ್ಬಂದಿಗಳ ಸೇವೆಯೂ ಅತ್ಯಂತ ಮಹತ್ವದ್ದಾಗಿದೆ ಮತ್ತು ಪ್ರಶಂಸನೀಯ ವಾಗಿದೆ ಎಂದು ಹೇಳಿದರು.
ಈ ಸರಳವಾದ ಕಾರ್ಯಕ್ರದಲ್ಲಿ
ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷ ಶೈಲೇಶ್ ಕುಮಾರ್, ಯೂತ್ ಕಾಂಗ್ರೆಸ್ ನ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಕಾಂಗ್ರೆಸ್ ಎಸ್ಸಿ ಘಟಕದ ರಾಜ್ಯ ಸಮಿತಿಯ ಸದಸ್ಯರಾದ ನಾಗರಾಜ್ ಲಾಯಿಲ , ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರಾದ
ಬಿ.ಕೆ.ವಸಂತ್ ಬೆಳ್ತಂಗಡಿ ,
ಯೂತ್ ಕಾಂಗ್ರೆಸ್ ಸದಸ್ಯರಾದ ಗಣೇಶ್ ಕಣಿಯೂರು , ಕಾಂಗ್ರೆಸ್ ಪಕ್ಷದ ಮುಖಂಡರಾದ ಸತೀಶ್ ದೊಡ್ಡ ಮನೆ, ಧನಂಜಯ್ (ಧನು) ಗುರುವಾಯನಕೆರೆ, ಸುರೇಂದ್ರ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.







