ರೋಟರಿ ಕ್ಲಬ್ಬಿನಿಂದ ತಾಲೂಕಿನ 50 ದಾದಿಯರಿಗೆ ಗೌರವಾರ್ಪಣೆ

Facebook
Twitter
LinkedIn
WhatsApp

50ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರು ವಿಶ್ವ ದಾದಿಯರ ದಿನವಾದ ಮೇ 12ರಂದು ತಾಲೂಕಿನ‌ ವಿವಿಧ ಆಸ್ಪತ್ರೆಗಳ 50ಮಂದಿ ದಾದಿಯರನ್ನು ಗುರುತಿಸಿ, ಗೌರವಿಸುವ ಮೂಲಕ ತಮ್ಮ ಕ್ಲಬ್ಬಿನ ಸುವರ್ಣ ಮಹೋತ್ಸವ ವರ್ಷಾಚರಣೆಯ ಕಾರ್ಯಕ್ರವೊಂದನ್ನು ಸ್ಮರಣೀಯವಾಗಿಸಿದರು.
ಕೊರೋನಾ ಸೋಂಕಿನ‌ ಭೀತಿಯಿರುವ ಇಂದಿನ ದಿನಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರನ್ನು ಕೊರೋನಾ ವಿರುದ್ಧ ಸಮರ ಸಾರಿರುವ ವಾರಿಯರ್ಸ್ ಎಂದು ಗುರುತಿಸಲಾಗುತ್ತಿದ್ದು; ಇಂತಹ ಕಠಿಣ ದುಡಿಮೆಯ ದಾದಿಯರನ್ನು ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ಗುರುತಿಸಿ, ಗೌರವಿಸಿದ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿಕೊಂಡು ಭಾಗವಹಿಸುವ ಮೂಲಕ ಕೊರೋನಾ ಸೋಂಕಿನ ವಿರುದ್ಧ ಮುಂಜಾಗ್ರತೆಯ ಸಂದೇಶ ಸಾರಿದರು.


ತಾಲೂಕಿನ ಬೆಳ್ತಂಗಡಿ ಸಮುದಾಯ ಆಸ್ಪತ್ರೆ, ಹತ್ಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ, ಅಳದಂಗಡಿ‌ ಪ್ರಾಥಮಿಕ ಆರೋಗ್ಯ ಕೇಂದ್ರ, ವೇಣೂರು ಪ್ರಾಥಮಿಕ‌ ಆರೋಗ್ಯ ಕೇಂದ್ರ, ಕಕ್ಕಿಂಜೆ ಪ್ರಾಥಮಿಕ ಆರೋಗ್ಯ ಕೇಂದ್ರ, ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೋನಾ ವಾರಿಯರ್ಸ್ ದಾದಿಯರನ್ನು ಗೌರವಿಸಲಾಯಿತು.
ರೋಟರಿ ಚುನಾಯಿತ ಉಪ ರಾಜ್ಯಪಾಲ ಪ್ರತಾಪಸಿಂಹ ನಾಯಕ್, ಸದಸ್ಯರಾದ ಶಶಿಕಾಂತ್ ಡೋಂಗ್ರೆ, ಚಂದ್ರಕಾಂತ್, ಬಿ. ಕೆ. ಧನಂಜಯ ರಾವ್, ಪಿತಾಂಬರ ಹೆರಾಜೆ, ಅ್ಯನ್ಸ್ ಕ್ಲಬ್ ಸದಸ್ಯರಾದ ದೀಪಾಲಿ ಡೋಂಗ್ರೆ, ರಾಜಶ್ರೀ, ಡಾl ವಿದ್ಯಾವತಿ, ಡಾl ಸುಶ್ಮಾ ಡೋಂಗ್ರೆ, ಸುಮಂಗಲಾ ಶ್ರೀಕೃಷ್ಣ ಭಟ್, ಉದಯಶಂಕರ್ ಕೆ., ರೋಟರಿ ಕ್ಲಬ್ಬಿನ‌ ಕಾರ್ಯದರ್ಶಿ ಪ್ರಕಾಶ್ ನಾರಾಯಣ್, ಸದಸ್ಯರಾದ ವೆಂಕಟ್ರಾಯ ಅಡೂರು, ಮೇಜರ್ ಜನರಲ್ ಎಂ. ವಿ. ಭಟ್, ಡಾl ಪ್ರದೀಪ್ ನಾವೂರು, ಡಾl ಶಶಿಧರ ಡೋಂಗ್ರೆ, ನಿತ್ಯಾನಂದ ಶೆಟ್ಟಿ ನೊಚ್ಚ, ಶ್ರೀಕೃಷ್ಣ ಭಟ್, ಶ್ರವಣ್ ಕಾಂತಾಜೆ, ರಾಜಗೋಪಾಲ ಭಟ್ ಮತ್ತಿತರರು ತಾಲೂಕಿನ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ನಡೆದ ಸರಳ‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Latest News

Related Posts