
ಪಟ್ರಮೆಯ ವಾರ್ಡ್ -2 ರ ಬಡಕುಟುಂಬವೊಂದರ ಮನೆಯ ಮಾಡು ತೀರಾ ಕುಸಿದ ಸ್ಥಿತಿಯಲ್ಲಿದ್ದಾಗ ಸದ್ರಿ ಮಾಡನ್ನು ಸಂಪೂರ್ಣ ಹೊಸದಾಗಿ ನಿರ್ಮಿಸಲು ಅಗತ್ಯ ನೆರವು ನೀಡುವುದಾಗಿ ಈ ಹಿಂದೆ ಪಟ್ರಮೆಯ ಭಗತ್ ಸಿಂಗ್ ಯುವ ಕೇಂದ್ರ ಭರವಸೆ ಕೊಟ್ಟಿತ್ತು . ಈ ಹಿನ್ನೆಲೆಯಲ್ಲಿ ಇದೀಗ ಸದ್ರಿ ಮಾಡನ್ನು ಪೂರ್ಣವಾಗಿ ಹೊಸದಾಗಿ ನಿರ್ಮಿಸಲಾಯಿತು. ಭಗತ್ ಸಿಂಗ್ ಯುವ ಕೇಂದ್ರದಿಂದ ಶ್ರಮನೆರವು ಹಾಗೂ ಧನನೆರವುಗಳನ್ನು ಒದಗಿಸಿದ್ದರು.
ಪಟ್ರಮೆ ಗ್ರಾಮ ಪಂಚಾಯತ್ ಸದಸ್ಯ ಶ್ಯಾಮರಾಜ್ ಪಟ್ರಮೆ ಭಗತ್ ಸಿಂಗ್ ಯುವ ಕೇಂದ್ರದ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.







