ತನ್ನ ಇಡೀ ಜೀವನವನ್ನು ರೋಗಿಗಳ ಸೇವೆಗೆ ಮುಡುಪಾಗಿಟ್ಟ ಪ್ಲಾರೆನ್ಸ್ ನೈಟಿಂಗ್ ಗೇಲ್ ಅವರ ನೆನಪಿಗಾಗಿ ಅವರ ಜನ್ಮ ದಿನವಾದ ಮೇ ತಿಂಗಳ 12 ನೇ ದಿನಾಂಕದಂದು ಅಂತರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಿ ನಮಗಾಗಿ ಸದಾ ಸೇವೆ ಸಲ್ಲಿಸುತ್ತಿರುವ ಎಲ್ಲಾ ದಾದಿಯರ ಸೇವೆಯನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಉಜಿರೆಯ ಬೆನಕ ಆಸ್ಪತ್ರೆ ಮತ್ತು ಬೆಲ್ತಂಗಡಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಆಸ್ಪತ್ರೆಯ ಆವರಣದಲ್ಲಿ ವಿಶ್ವ ದಾದಿಯರ ದಿನವನ್ನು ಆಚರಿಸಲಾಯಿತು .ಸೋಂಕು ನಿಯಂತ್ರಣ ನರ್ಸ್ ಶ್ವೇತಾ.ಏನ್.ವಿ ಇವರು ಆಸ್ಪತ್ರೆಯ ಎಲ್ಲಾ ಶುಶ್ರೂಷಕರಿಗೆ ದೀಪವನ್ನು ನೀಡಿ ಪ್ರತಿಜ್ಞಾ ವಿಧಿಯನ್ನು ಬೋದಿಸಿದರು. ಆಸ್ಪತ್ರೆಯ ಹಿರಿಯ ದಾದಿಯರಾದ ಸಿಸ್ಟರ್ .ಪ್ರಸನ್ನ ಮತ್ತು ಸಿಸ್ಟರ್ .ಉಷಾ ಗೌಡ ಅವರನ್ನು ರೋಟರಿ ಕ್ಲಬ್ ನಿಂದ ಫಲ – ಪುಷ್ಪ ನೀಡಿ ಸನ್ಮಾನಿಸಲಾಯಿತು. ರೋಟರಿ ಕ್ಲಬ್ ನ ಆಸಿಸ್ಟಂಟ್ ಗವರ್ನರ್ ರೋ // ಪ್ರತಾಪ್ ಸಿಂಹ ನಾಯಕ್ ಮತ್ತು ಬೆಲ್ತಂಗಡಿ ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷರಾದ ಶ್ರೀ .ಬಿ .ಕೆ .ಧನಂಜಯ್ ರಾವ್ ಅವರು ದಾದಿಯರು ಆಸ್ಪತ್ರೆಯ ಆಧಾರ ಸ್ತ0ಭ ಗಳೆಂದು ತಿಳಿಸಿ ಅವರ ಸೇವೆಯ ಮಹತ್ವವನ್ನು ವಿವರಿಸಿ ಮತ್ತು ಆಸ್ಪತ್ರೆಯ ನಗು ಮುಗದ ದಾದಿಯರ ಸೇವೆಯನ್ನು ಕೊಂಡಾಡಿದರು .
ಇದೇ ಸಂದರ್ಭದಲ್ಲಿ ರೋಟರಿ ಕ್ಲಬ್ ವತಿಯಿಂದ ಬೆನಕ ಆಸ್ಪತ್ರೆಗೆ ಎರಡು ಸ್ವಯಂಚಾಲಿತ ಸ್ಯಾನಿಟೈಸರ್ ಯಂತ್ರಗಳನ್ನು ನೀಡಲಾಯಿತು .ಅಧ್ಯಕ್ಷ ಸ್ಥಾನ ವಹಿಸಿದ ವೈದ್ಯಕೀಯ ನಿರ್ದೇಶಕರಾದ ಡಾ .ಗೋಪಾಲಕೃಷ್ಣ ರವರು ಆಸ್ಪತ್ರೆ ಈ ಹಂತಕ್ಕೆ ಬೆಳೆದು ಉತ್ತಮ ಸೇವೆ ನೀಡುವುದಕ್ಕೆ ನಮ್ಮ ದಾದಿಯರ ನಿಸ್ವಾರ್ಥ ಮತ್ತು ಬದ್ಧತೆಯ ಮನೋಭಾವವೇ ಕಾರಣ ಎಂದು ತಿಳಿಸಿ ರೋಟರಿ ಕ್ಲಬ್ ವತಿಯಿಂದ ಹಿರಿಯ ದಾದಿಯರನ್ನು ಗುರುತಿಸಿ , ಸನ್ಮಾನಿಸಿದ್ದು ನಿಜಕ್ಕೂ ಸ್ಲಾಗನೀಯವೆಂದು ಹರ್ಷ ವ್ಯಕ್ತಪಡಿಸಿದರು .ವಿಶ್ವ ದಾದಿಯರ ದಿನದ ಆಚರಣೆಯ ಉದ್ದೇಶ ಮತ್ತು ಮಹತ್ವವನ್ನು ಪ್ರಧಾನ ವ್ಯವಸ್ಥಾಪಕರಾದ ಶ್ರೀ .ದೇವಸ್ಯ ವರ್ಗೀಸ್ ಮಾಹಿತಿ ನೀಡಿದರು .ಶ್ರೀ.ಎಸ್.ಜಿ. ಭಟ್ ಇವರು ಸ್ವಾಗತಿಸಿ ವಂದಿಸಿದರು. ಕರೋನ ವಾರಿಯರ್ಸ್ ಕುರಿತಾದ ತಾನೇ ರಚಿಸಿದ ಹಾಡನ್ನು ಮಾ.ಅಮೃತ್ ಅರುಣ್ ಕುಮಾರ್ ರವರು ಶೃಶ್ರಾವ್ಯವಾಗಿ ಹಾಡಿದರು .ರೋಟರಿ ನಿಯೋಜಿತ ಕಾರ್ಯದರ್ಶಿ ರೋ//ಶ್ರೀಧರ್ .ಕೆ .ವಿ ಮತ್ತು ರೋಟರಿ ಬಂದುಗಳು ಮತ್ತು ವೈದ್ಯರುಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಶ್ವಿಗೊಳಿಸಿದರು .







