ಧರ್ಮಸ್ಥಳ ಕಾರ್ ಮ್ಯೂಸಿಯಂನ ಛಾವಣಿ ರಿಪೇರಿ ಸಂದರ್ಭ ಅವಘಡ

Facebook
Twitter
LinkedIn
WhatsApp

ಆಯ ತಪ್ಪಿ ಬಿದ್ದ ಓರ್ವ ಕಾರ್ಮಿಕ ಸಾವು-ಇಬ್ಬರಿಗೆ ಗಾಯ

ಮೂವರು ಕಾರ್ಮಿಕರು ಛಾವಣಿಯಿಂದ ಬಿದ್ದ ಪರಿಣಾಮ ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನಿಬ್ಬರು ಕಾರ್ಮಿಕರು ಗಾಯಾಳುಗಳಾಗಿ ಉಜಿರೆಯ ಎಸ್.ಡ್.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದ ಘಟನೆ ಮೇ 15ರಂದು ವರದಿಯಾಗಿದೆ.
ದುರ್ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನನ್ನು ಕಾರವಾರದ ಸಂಜೀವ ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪವನ್ ಕುಮಾರ್ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ಧಾವಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡು, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Latest News

Related Posts