ಮೂಡುಬಿದಿರೆಯ ಹೃದಯ ಭಾಗದಲ್ಲಿ ಕ್ವಾರಂಟೈನ್

ಬಿಗ್ ಬ್ರೇಕಿಂಗ್ ನ್ಯೂಸ್  ಉಪ್ಪಿನಂಗಡಿಗೂ ವಕ್ಕರಿಸಿದ ಕೊರೋನಾ
Facebook
Twitter
LinkedIn
WhatsApp

ಸುರಕ್ಷತೆಯ ಬಗ್ಗೆ ಸ್ಥಳೀಯರಲ್ಲಿ‌ ಅನುಮಾನ; ಸಹಜ ಆತಂಕ

ಮೂಡುಬಿದಿರೆ: ಈ ವಾರ ಮುಂಬೈಯಿಂದ ಮತ್ತು ಮಹಾರಾಷ್ಟ್ರದ ಇತರ ಭಾಗಗಳಿಂದ ಹುಟ್ಟೂರಿಗೆ ಮರಳಿರುವ ಮೂಲತಃ ಮೂಡುಬಿದಿರೆ ಪರಿಸರದವರಾಗಿರುವ ಕೆಲವರಿಗೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲೇ ಕ್ವಾರಂಟೈನ್ ಮಾಡಲಾಗಿದ್ದು, ಕ್ವಾರಂಟೈನ್ ವ್ಯವಸ್ಥೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿಲ್ಲ; ಜೊತೆಗೆ ಸರಯಾದ ಭದ್ರತೆಯನ್ನೂ ನೀಡಲಾಗಿಲ್ಲ ಎಂಬ ಅಸಮಾದಾನ ಸ್ಥಳೀಯರಿಂದ ವ್ಯಕ್ತವಾಗುತ್ತಿದ್ದು, ಪರಿಸರದ ನಿವಾಸಿಗಳು ಆತಂಕಗೊಳ್ಳುವಂತೆ ಮಾಡಿದೆ.
ಮೂಡುಬಿದಿರೆಯ ತೀರಾ ಹೃದಯ ಭಾಗದಲ್ಲಿರುವ ಹೋಟೆಲ್ ಕಟ್ಟಡ ಒಂದರಲ್ಲಿ ಸ್ವಯಂ ವೆಚ್ವ ಭರಿಸಬಲ್ಲ ಕುಟುಂಬಗಳಿಗೆ 15ದಿನಗಳ ಕ್ವಾರಂಟೈನ್ ಗೆ ಅವಕಾಶ ಕಲ್ಪಿಸಲಾಗಿದ್ದು, ಈ ವಸತಿಗೃಹದಲ್ಲಿ 30ಕ್ಕೂ ಹೆಚ್ಚು ಮಂದಿಯನ್ನು ಕ್ಬಾರಂಟೈನ್ ಮಾಡಲಾಗಿದೆಯೆಂದು ಹೇಳಲಾಗುತ್ತಿದೆ. ಈ ವಸತಿಗೃಹದಲ್ಲಿ 15 ಜನ ಮಾತ್ರ ತಂಗಿದ್ದಾರೆಂದು ಕೆಲವು ಅನಧಿಕೃತ ಮೂಲಗಳು ಸ್ಪಷ್ಟಪಡಿಸಿದ್ದರೂ ಇಲ್ಲಿನ ನಿಖರ ಸಂಖ್ಯೆಯ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಪ್ರಾಪ್ತವಾಗಿಲ್ಲ.
ಇಲ್ಲಿರುವುದು ಸಂಖ್ಯೆಯ ಗೊಂದಲ ವಲ್ಲ. ಇಲ್ಲಿ ಅಧಿಕಾರಿಗಳು ಅನುಸರಿಸಿ ರುವ ಸುರಕ್ಷಾ ವಿಧಾನಗಳ ಬಗ್ಗೆ ಜನರಿಗೆ ನಿಜಕ್ಕೂ ಆತಂಕವಿದೆ. ಮೂಡುಬಿದಿರೆ ಯ ಹೃದಯ ಬಾಗದಲ್ಲಿ ಅದೂ ರಾಷ್ಟ್ರೀಯ ಹೆದ್ದಾರಿಗೆ ಒತ್ತಿಕೊಂಡೇ ಇರುವ ಈ ವಸತಿಗೃಹದ ಕಟ್ಟಡದಲ್ಲಿ ಹಲವು ವ್ಯಾಪಾರೀ ಮಳಿಗೆಗಳಿದ್ದು, ಒಂದು ವಾಣಿಜ್ಯ ಬ್ಯಾಂಕ್ ಸಹ ಕಾರ್ಯಾಚರಿಸುತ್ತಿದೆ. ಈ ಕಟ್ಟಡದಲ್ಲಿ ಹಲವು ರೀತಿಯ ವ್ಯಾಪಾರ ವ್ಯವಹಾರಕ್ಕಾಗಿ ನೂರಾರು ಜನ ನಿತ್ಯ ಓಡಾಡುತ್ತಿದ್ದು ಜನರ ಎದೆ ಢವಢವಕ್ಕೆ ಕಾರಣವಾಗಿದೆ. ಈ ಕಟ್ಟಡ ಮೂಡು ಬಿದಿರೆಯ ಹೃದಯ ಬಾಗದಲ್ಲೇ ಇರುವುದರಿಂದ ಕಟ್ಟಡದ ಸುತ್ತ ಬ್ಯಾರಿಕೇಡ್ ಗಳನ್ನು ಹಾಕಬೇಕಾಗಿತ್ತು. ಇಲ್ಲಿ ಇಂತಹ ವ್ಯವಸ್ಥೆ ಇಲ್ಲದಿರುವ ಕಾರಣ ಕಟ್ಟಡದ ಸುತ್ತ ಎರಡು ದಿನಗಳಿಂದ ಹೆಚ್ಚೆಚ್ಚು ವಾಹನಗಳು ಬಂದು ನಿಲ್ಲುತ್ತಿದ್ದು ಜನರ ಆತಂಕ ಹೆಚ್ಚಲು ಕಾರಣವಾಗಿದೆ. ಹಗಲು ಹೊತ್ತು ಓರ್ವ ಮಹಿಳಾ ಹೋಂಗಾರ್ಡ್ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ರಾತ್ರಿ ಹೊತ್ತು ರಾತ್ರಿ ಪಾಳಿಯ ಪೋಲೀಸರೊಬ್ಬರು ಕಟ್ಟಡವನ್ನು ಕಾಯುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಕ್ವಾರಂಟೈನ್ ನಿಂದ ಇಬ್ಬರು ವ್ಯಕ್ತಿಗಳು ಎಸ್ಕೇಪ್ ಆಗಿದ್ದಾರೆಂಬ ವದಂತಿಯೂ ಹಬ್ಬಿತ್ತು.
ಮೇ 16ರಂದು ಕ್ವಾರಂಟೈನ್ ನಲ್ಲಿರುವ ಕೆಲವರು ಕೊಠಡಿಗಳಿಂದ ಹೊರಬಂದು ರಸ್ತೆಯಲ್ಲಿ ಓಡಾಡಿದ್ದಾರೆಂಬ ವದಂತಿ ಹಬ್ಬಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇಲ್ಲಿ ಕ್ವಾರಂಟೈನ್ ನಲ್ಲಿರುವ ಕುಟುಂಬವೊಂದು ತಮ್ಮ ಜೊತೆಗೆ ತಂದಿದ್ದ ಬೆಲೆಬಾಳುವ ಕೆಲವು ವಸ್ತುಗಳನ್ನು ತಮ್ಮ ಕುಟುಂಬಗಳಿರುವ ಮನೆಗಳಿಗೆ ಗುಪ್ತವಾಗಿ ರವಾನಿಸಿವೆ ಎಂಬ ವಿಚಾರವನ್ನೂ ಸ್ಥಳೀಯರು ಬಿಚ್ಚಿಡುತ್ತಿದ್ದಾರೆ. ಕ್ವಾರಂಟೈನ್ ಸ್ಥಳ ವನ್ನು ಪುರಸಭಾ ಆಡಳಿತ ನಿಗದಿ ಮಾಡುತ್ತದೆ. ಕ್ವಾರಂಟೈನ್ ಬಗ್ಗೆ ಅನುಸರಿಸಬೇಕಾದ ಕ್ರಮಗಳ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಪುರಸಭಾ ಮುಖ್ಯಾಧಿಕಾರಿಯವರೊಂದಿಗೆ ನಮ್ಮ ಪತ್ರಿಕೆ ಸಂಪರ್ಕಿಸಿದಾಗ ನಮ್ಮಲ್ಲಿ ಕ್ವಾರಂಟೈನ್ ನಿಂದ ಯಾರೂ ತಪ್ಪಿಸಿಕೊಂಡಿಲ್ಲ. ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಕ್ಬಾರಂಟೈನ್ ನಲ್ಲಿರುವವರ ಪೈಕಿ ಓರ್ವ ಮಹಿಳೆ ತುಂಬು ಗರ್ಭಿಣಿಯಾಗಿದ್ದು ಅವರು ಉಪಯೋಗಿಸಿರುವ ಕೆಲವು ಬಟ್ಟೆ ಬರೆಗಳನ್ನು ಅವರ ಕುಟುಂಬ ವರ್ಗದವರು ಒಯ್ದಿರಬಹುದು ಎಂಬ ಹೇಳಿಕೆ ನೀಡಿದ್ದಾರೆ. ಕ್ವಾರಂಟೈನ್ ನಲ್ಲಿರುವ ವ್ಯಕ್ತಿಯ ಬಟ್ಟೆಬರೆ ಅಥವಾ ಬೆಲೆಬಾಳುವ ವಸ್ತುಗಳನ್ನು ಈ ರೀತಿ ಅವರ ಮನೆಗೆ ಸಾಗಿಸಲು ಅವಕಾಶವಿದೆಯೇ ಎಂಬುದನ್ನು ಪುರಸಭಾಡಳಿತ, ಜಿಲ್ಲಾಡಳಿತ ಮತ್ತು ಸರಕಾರ ಸ್ಪಷ್ಟಪಡಿಸಿ ಈ ಬಗ್ಗೆ ಇರುವ ಗೊಂದಲವನ್ನು ನಿವಾರಿಸಿ ಜನರ ಆತಂಕವನ್ನು ದೂರಮಾಡುವ ಮೂಲಕ ಕೊರೋನಾ ಮುಕ್ತಿಗೆ ಪಣತೊಡ ಬೇಕಾಗಿದೆ.

Latest News

Related Posts