ಮೇ 17ರಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕರಾವಳಿ ಡ್ಯಾನ್ಸ್ ಯೂನಿಯನ್ನಿನ ಸದಸ್ಯರಿಗೆ ಲಾಕ್ ಡೌನ್ ಸಂದರ್ಭದ ‘ಶ್ರಮಿಕ ನೆರವು’ ಆಹಾರದ ಕಿಟ್ ವಿತರಿಸಿದರು.
ಕೊರೋನಾ ಸೋಂಕು ಹರಡದಂತೆ ದೇಶದ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಸೂಚಿಸಿದ ಮಾರ್ಗಸೂಚಿಗಳಲ್ಲಿ ಮಾಸ್ಕ್ ಧಾರಣೆಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಶಿಸ್ತಿನಿಂದ ಪಾಲಿಸಿದರೂ, ವೈಯಕ್ತಿಕ ಅಂತರ ಪಾಲಿಸಲು ಮರೆತಂತಿತ್ತು. ಪ್ರಾಯಶಃ ಲಾಕ್ ಡೌನ್ ಸಂದರ್ಭದ ಹಸಿವು ಆಹಾರದ ಕಿಟ್ ಸ್ವೀಕರಿಸುವಾಗ ಆತುರದಲ್ಲಿ ವೈಯಕ್ತಿಕ ಅಂತರವನ್ನು ಮರೆಸಿದಂತಿತ್ತು.






