ಬೆಳ್ತಂಗಡಿ ತಾಲೂಕಿಗೆ ವಕ್ಕರಿಸಿದ ಕೊರೋನಾ ಹೆಮ್ಮಾರಿ
ಇದುವರೆಗೆ ಕೊರೋನಾ ಸೋಂಕು ಅಲ್ಲಿದೆ, ಇಲ್ಲಿದೆ…ಆದರೆ ನಮ್ಮೂರಲ್ಲಿ ಇಲ್ಲ ಎಂದು ನಿರಾಳವಾಗಿ ಭಂಡ ಧೈರ್ಯದಲ್ಲಿದ್ದ ಬೆಳ್ತಂಗಡಿ ತಾಲೂಕಿನ ಜನತೆಗೆ ‘ನಾನು ನಿಮ್ಮಲ್ಲಿಯೇ ಇದ್ದೇನೆ’ ಎಂದು ಹೇಳುತ್ತಿದೆ ಕೊರೋನಾ ಹೆಮ್ಮಾರಿ.
ಬೆಳ್ತಂಗಡಿ ತಾಲೂಕಿನ ಆರಂಬೋಡಿಗೆ ಐದು ದಿನಗಳ ಹಿಂದೆ ಮುಂಬಯಿಯಿಂದ ಆಗಮಿಸಿ, ಸ್ಥಳೀಯ ಶಾಲೆಯಲ್ಲಿ ಕ್ವಾರಂಟೈನಿಗೆ ಒಳಗಾಗಿದ್ದ 28ವರ್ಷದ ಮಹಿಳೆಗೆ ಇದೀಗ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಹಾಸ್ಯಾಸ್ಪದವಾಗಿ ಮಾತನಾಡುವ ಬೆಳ್ತಂಗಡಿ ತಾಲೂಕಿನ ಜನತೆ ಇನ್ನಾದರೂ ಜಾಗೃತರಾಗಿ ಮಾಸ್ಕ್ ಧಾರಣೆ, ವೈಯಕ್ತಿಕ ಅಂತರ ಸಹಿತ ಸಾಧ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೊರೋನಾ ಹೆಮ್ಮಾರಿಯನ್ನು ತಾಲೂಕಿನಿಂದ ಹೊಡೆದೋಡಿಸಲು ಸಂಕಲ್ಪಿಸಬೇಕಾಗಿದೆ.







