ಶಿರ್ಲಾಲು ಅಶಕ್ತ ಕುಟುಂಬಗಳಿಗೆ ದಿನಬಳಕೆಯ ಆಹಾರ ಕಿಟ್ ವಿತರಣೆ ಮಾಸ್ಕ್ ಧರಿಸಿ ವೈಯಕ್ತಿಕ‌ ಅಂತರ ಕಾಪಾಡಿದ ಯುವಕರು

Facebook
Twitter
LinkedIn
WhatsApp

ಶಿರ್ಲಾಲು ಗ್ರಾಮದ ಮಹಿಳೆಯೊಬ್ಬರಿಗೆ ಕೊವಿಡ್-19 ಪಾಸಿಟಿವ್ ಕಂಡು ಬಂದಂತಹ ಹಿನ್ನೆಲೆಯಲ್ಲಿ ಶಿರ್ಲಾಲು ಸುತ್ತಮುತ್ತಲಿನ ಕೆಲವು ಮನೆಗಳನ್ನು ಕಂಟೈನ್ಮೆಂಟ್ ಝೋನ್ ವ್ಯಾಪ್ತಿ ಯನ್ನಾಗಿ ಜಿಲ್ಲಾಡಳಿತ ಘೋಷಿಸಿದೆ.ಈ ಸಂದರ್ಭದಲ್ಲಿ ಗ್ರಾಮದಲ್ಲಿನ ತೀರ ಅಶಕ್ತ ಕುಟುಂಬಗಳನ್ನು ಗುರುತಿಸಿ ದಾನಿಗಳಾದ ಸೌದಿ ಅರೇಬಿಯಾದ ಉದ್ಯೋಗಿ ಸುರೇಶ್ ಕರ್ದೊಟ್ಟು ಹಾಗೂ ಕೆನರಾ ಬ್ಯಾಂಕ್ ಅಧಿಕಾರಿ ಕಿಶೋರ್ ಕುಮಾರ್’ರವರ ಸಹಕಾರ ದೊಂದಿಗೆ ದಿನ ಬಳಕೆಯ ಆಹಾರದ ಕಿಟ್’ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ದಿನೇಶ್ ಕುಮಾರ್ ಕರ್ದೊಟ್ಟು,ಯುವವಾಹಿನಿ(ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಎಂ.ಕೆ ಪ್ರಸಾದ್,ರಕ್ಷಿತ್ ಕುಮಾರ್ , ಯುವ ವಾಹಿನಿ ಸಂಚಾಲನ ಸಮಿತಿ ಅಧ್ಯಕ್ಷರಾದ ಜ್ಞಾನೇಶ್ ಕುಮಾರ್ ಕಟ್ಟ, ಕಾರ್ಯದರ್ಶಿ ರಂಜಿತ್ ಪೂಜಾರಿ ಅಜಿರೋಳಿ,ರಾಜೇಶ್ ಬರಮೇಲು ಮತ್ತಿತರರು ಹಾಜರಿದ್ದರು.

Latest News

Related Posts