ಬೆಳ್ತಂಗಡಿ:ತಾಲೂಕಿನ ಕರಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೆ ಅನೀಶ್ ಎಂಬವರ ತೋಟದಲ್ಲಿ ಮೇ 30ರ ಮಧ್ಯಾಹ್ನ ಮಿಡತೆಗಳ ಗುಂಪು ಕಂಡುಬಂದಿದೆ.ಅನೀಶ್ ಅವರು ತನ್ನ ರಬ್ಬರ್ ತೊಟದಲ್ಲಿ ಹೋಗಿ ನೋಡಿದಾಗ ಮಿಡತೆಗಳು ರಬ್ಬರ್ ಗಿಡಗಳ ಕೆಳಗೆ ಇರುವ ಗಿಡ ಬಳ್ಳಿಗಳ ಸೊಪ್ಪುಗಳನ್ನು ತಿನ್ನುವುದು ಕಂಡುಬಂದಿದೆ. ಈಗಾಗಲೇ ಎಲ್ಲಾ ಕಡೆಯಲ್ಲೂ ಮಿಡತೆಗಳ ಹಾವಳಿಯಿಂದ ತತ್ತರಿಸುತ್ತಿರುವಾಗ ತಾಲೂಕಿನಲ್ಲಿಯೂ ಮಿಡತೆಗಳು ಕಂಡು ಬಂದದ್ದು ಕೃಷಿಕರು ಚಿಂತೆಗೀಡಾಗುವಂತೆ ಮಾಡಿದೆ.






