ವಾರ ಭವಿಷ್ಯ- 1-06-2020 ರಿಂದ 7-06-2020 ರವರೆಗೆ

ವಾರ ಭವಿಷ್ಯ: 13-04-2020 ರಿಂದ 19-04-2020 ರವರೆಗೆ
Facebook
Twitter
LinkedIn
WhatsApp

ಎಸ್.ಗೋಪಾಲಕೃಷ್ಣ. ಶಗ್ರಿತ್ತಾಯ. ಜ್ಯೋತಿಷಿ, ಶಾಂತಿಗೋಡು. 9902209240.

ಮೇಷ:ಹಣಕಾಸಿನ ವ್ಯವಹಾರದಲ್ಲಿ ಗೆಲುವು, ಕೆಲಸ ಕಾರ್ಯಗಳ ಒತ್ತಡದಿಂದ ವಿಶ್ರಾಂತಿಗೆ ಭಂಗ. ಹಿತಶತ್ರುಗಳ ಮಾತಿನ ಮೋಡಿಗೆ ಬಲಿಯಾಗದಿರಿ. ಅತಿಥಿಗಳ ಆಗಮನದಿಂದ ಸಂತಸ.
ಶುಭ ಸಂಖ್ಯೆ-6.
ವೃಷಭ:ಕೆಲಸದ ಒತ್ತಡ ಅಧಿಕವಾಗಿರುವುದು. ಮನೆಯಾಕೆಯ ಸಲಹೆ ಸೂಚನೆಗಳು ನೆಮ್ಮದಿಗೆ ಕಾರಣವಾದೀತು. ನೆಂಟರಿಷ್ಟರ ಬರುವಿಕೆಯಿಂದ ಖರ್ಚು ಅಧಿಕವೆನಿಸುವುದು.
ಶುಭ ಸಂಖ್ಯೆ- 5.
ಮಿಥುನ:ಕುಟುಂಬದ ಸಹಕಾರದಿಂದ ಕೈಗೊಂಡ ಯೋಜನೆಗಳು ಕೈಗೂಡಿದ ತೃಪ್ತಿ. ಸರಕಾರದ ನಿರ್ಣಯದಿಂದ ನಷ್ಟ ಅನುಭವಿಸಬೇಕಾದೀತು. ನೆರೆಮನೆಯವರ ಕಷ್ಟಕ್ಕೆ ಸ್ಪಂದಿಸಿದ ಸಂತಸ ನಿಮಗಾದೀತು.
ಶುಭ ಸಂಖ್ಯೆ- 8.
ಕರ್ಕಾಟಕ:ಬಂಧುಗಳ ಅನಾರೋಗ್ಯದ ಕಾರಣ ಆತಂಕ ಹೆಚ್ಚಾದೀತು. ನೌಕರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಸಾರ್ವಜನಿಕ ಮಾನ ಸನ್ಮಾನಗಳಿಂದ ಕೃತಾರ್ಥ ಭಾವ.
ಶುಭ ಸಂಖ್ಯೆ-4.
ಸಿಂಹ;ಶೀತ ಜ್ವರಾದಿ ಬಾಧೆಗಳಿಂದ ಮಾನಸಿಕ ಕ್ಷೋಭೆಗೊಳಗಾಗುವಿರಿ. ಶತ್ರುಗಳ ಮೋಸಕ್ಕೆ ಬಲಿಯಾಗುವ ಸಂಭವವಿದೆ. ಜಾಗರೂಕತೆಯಿಂದ ವ್ಯವಹರಿಸಿ. ಆದಿತ್ಯ ಹೃದಯ ಪಠಿಸಿ.
ಶುಭ ಸಂಖ್ಯೆ- 7.
ಕನ್ಯಾ:ನಿಮ್ಮದೇ ಹಣ ಸಮಯಕ್ಕೆ ಕೈಗೆ ಬಾರದೇ ಆತಂಕ ಪಡಬೇಕಾದೀತು. ಚಾಡಿ ಮಾತಿಗೆ ಕಿವಿಗೊಡುವುದರಿಂದ ಪ್ರಮಾದವಾಗುವ ಸಂಭವ. ಚಿಕ್ಕ ಪ್ರಮಾದ ದೊಡ್ಡ ಆತಂಕವನ್ನು ಸೃಷ್ಟಸೀತು.
ಶುಭ ಸಂಖ್ಯೆ-3.
ತುಲಾ:ಛಲದಿಂದ ಕಾರ್ಯಪ್ರವೃತ್ತರಾದರೆ ಜಯ ನಿಶ್ಚಿತ. ಸಾಂಸಾರಿಕವಾಗಿ ಮನಸ್ಸಿಗೆ ನೆಮ್ಮದಿ. ಅವಶ್ಯಕತೆಗೆ ತಕ್ಕ ಹಣಕಾಸಿನ ಒದಗಣೆಗೆ ತೊಂದರೆಯಾಗದು.
ಶುಭ ಸಂಖ್ಯೆ-9.
ವೃಶ್ಚಿಕ:ಮಾತಿಗೆ ಮಾತು ಬೆಳೆಸದಿರಿ. ಯಾವುದೇ ವಿಚಾರದಲ್ಲಿ ನಿರ್ಲಿಪ್ತರಂತೆ ಇದ್ದರೆ ಒಳ್ಳೆಯದು. ಸ್ತ್ರೀಯರಿಂದ ಅನಾವಶ್ಯ ಕಿರಿಕಿರಿ ಅನುಭವಿಸುವಿರಿ. ಮಕ್ಕಳ ನೆರವಿನಿಂದ ಸಂತೃಪ್ತಿ.
ಶುಭ ಸಂಖ್ಯೆ-1.
ಧನು:ಗೆಳೆಯರ ವರ್ತನೆ ದೈರ್ಯಗೆಡುವಂತೆ ಮಾಡೀತು. ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಎಚ್ಚರದಿಂದಿರಿ. ವಾಹನಗಳು ಮಾರ್ಗ ಮಧ್ಯೆ ಕೈಕೊಟ್ಟು ಇಕ್ಕಟ್ಟು ಉಂಟಾಗಬಹುದು. ಗಣಪತಿ ಪ್ರಾರ್ಥನೆ ಮಾಡಿ.
ಶುಭ ಸಂಖ್ಯೆ-8.
ಮಕರ:ಕೈಕಾಲುಗಳಿಗೆ ಗಾಯವಾಗುವ ಸಂಭವ. ಶತ್ರುಗಳು ಮಿತ್ರರಾದಾರು. ಆರ್ಥಿಕ ನಷ್ಟ ನಿಮ್ಮನ್ನು ಕಂಗೆಡಿಸೀತು. ಸುಬ್ರಹ್ಮಣ್ಯನ ದರ್ಶನದಿಂದ ಕ್ಷೇಮ.
ಶುಭ ಸಂಖ್ಯೆ-9.
ಕುಂಭ:ಸಂಸಾರ ಸಹಿತ ದೇವದರ್ಶನ ಯೋಗ. ಕಾರ್ಯಜಯದಿಂದ ಮನಸ್ಸಿಗೆ ನೆಮ್ಮದಿ. ಬರಬೇಕಾದ ಹಣ ಹಿಂದಕ್ಕೆ ಬರುವ ಸಾಧ್ಯತೆ. ದೂರದ ನೆಂಟರು ನಿಮ್ಮ ಭೇಟಿಗೆ ಬರುವರು
ಶುಭಸಂಖ್ಯೆ-4.
ಮೀನ: ಆರ್ಥಿಕ ಸ್ಥಿತಿ ಸುಸ್ಥಿರವಾಗಿರುವುದು. ನೆನೆಗುದಿಗೆ ಬಿದ್ದಿರುವ ಕಾರ್ಯಗಳು ಸುಲಭವಾಗಿ ಕೈಗೂಡುವುದು. ಮಾನ ಸಮ್ಮಾನಗಳಿಂದ ನೆಮ್ಮದಿ ಪ್ರಾಪ್ತಿಯಾಗಲಿದೆ.
ಶುಭ ಸಂಖ್ಯೆ-1.

Latest News

Related Posts