ಕೊರೊನಾ ಮಹಾಮಾರಿಯಿಂದಾಗಿ ಕೆಎಂಸಿ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರದಲ್ಲಿ ರಕ್ತ ಸಂಗ್ರಹಣೆಯಲ್ಲಿ ಕೊರತೆ ಕಂಡು ಬಂದ ಕಾರಣ ಮೇ 31ರಂದು ಭಾನುವಾರದಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತಕೇಂದ್ರದಲ್ಲಿ ಜನಸೇವಾ ಟ್ರಸ್ಟಿನ ಮಾರ್ಗದರ್ಶಕರಾದ ಡಾ.ಪ್ರಸಾದ್ ಬಿ ಶೆಟ್ಟಿ ನಾರಾವಿ ಇವರ ಸಹಕಾರದಲ್ಲಿ ಟ್ರಸ್ಟ್ ನ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ 25 ಮಂದಿ ರಕ್ತದಾನಿಗಳು ರಕ್ತದಾನ ಮಹಾದಾನ ಎನ್ನುವ ಧ್ಯೇಯದೊಂದಿಗೆ ಸ್ವ ಇಚ್ಛೆಯಿಂದ ಆಗಮಿಸಿ ನಮ್ಮೊಂದಿಗೆ ರಕ್ತದಾನವನ್ನು ಮಾಡಿ ಮತ್ತೊಂದು ಜೀವಕ್ಕೆ ಉಸಿರಾಗಲು ಕಾರಣೀಕರ್ತ ರಾದರು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಉದಯ್ ಹೆಗ್ಡೆ ನಾರಾವಿ, ಪ್ರಧಾನ ಕಾರ್ಯದರ್ಶಿ ವಸಂತ್ ಆಚಾರ್ಯ ಮತ್ತು ನಿರ್ದೇಶಕರುಗಳಾದ ಅಭಿಜಿತ್ ಜೈನ್,ಜಗದೀಶ್ ಜೈನ್ ಮತ್ತು ಅಶೋಕ್ ಜೈನ್ ಉಪಸ್ಥಿತರಿದ್ದು ರಕ್ತದಾನ ಶಿಬಿರಕ್ಕೆ ಸಹಕರಿಸಿದರು.






