ಬೆಳ್ತಂಗಡಿ; ಶ್ರೀ ಕ್ಷೇತ್ರ ಹೊಂಬುಜ ಶ್ರೀ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ಬೆಳ್ತಂಗಡಿ ತಾಲೂಕಿನ ಜೈನ ಬಸದಿಯ ಪುರೋಹಿತ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಇಂದು ನಡೆಯಿತು.
ಭರತ್ ರಾಜ್ ಇಂದ್ರ ಕಾರ್ಕಳ ಇವರು ವಿತರಣೆಯ ನೇತೃತ್ವ ವಹಿಸಿದ್ದರು.
ಕರ್ನಾಟಕ ರಾಜ್ಯಾಧ್ಯಂತ 400 ರಷ್ಟು ಪುರೋಹಿತ ಕುಟುಂಬಗಳಿಗೆ ಈಗಾಗಲೇ ಕಿಟ್ಟ್ ವಿತರಣೆ ಮಾಡಲಾಗಿದ್ದು, ಇನ್ನುಳಿದ ಕುಟುಂಬಗಳಿಗೆ ವಿತರಿಸಲಾಗುವುದು ಎಂದು ಭಟ್ಟಾರಕರು ತಿಳಿಸಿದರು.
ತಾಲೂಕಿನಲ್ಲಿ ನಾರಾವಿ, ಅಳದಂಗಡಿ, ಗುರುವಾಯನಕೆರೆ, ಬಂಗಾಡಿ ಸೇರಿದಂತೆ 14 ಬಸದಿಗಳ 35 ಕುಟುಂಬಗಳಿಗೆ ತಲಾ 1 ಸಾವಿರ ರೂ.ಮೊತ್ತದ ಆಹಾರದ ಕಿಟ್ಟ್, 500 ರೂ.ನಗದು ವಿತರಿಸಲಾಯಿತು.







