ಮಡಂತ್ಯಾರಿನಲ್ಲಿ‌ ಮಾಸ್ಕ್ ದಿನಾಚರಣೆ

ಮಡಂತ್ಯಾರಿನಲ್ಲಿ‌ ಮಾಸ್ಕ್ ದಿನಾಚರಣೆ
Facebook
Twitter
LinkedIn
WhatsApp

ಮಡಂತ್ಯಾರು: ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧಾರಣೆಯ ಅನಿವಾರ್ಯತೆಯನ್ನು ಜನಸಾಮಾನ್ಯರಿಗೆ ತಿಳಿಸಲು ರಾಜ್ಯ ಸರಕಾರ ಸೂಚಿಸಿದಂತೆ ಜೂನ್ 18ರಂದು ಮಡಂತ್ಯಾರಿನಲ್ಲಿ ಮಾಸ್ಕ್ ದಿನಾಚರಣೆ ಆಚರಿಸಲಾಯಿತು.
ಮಡಂತ್ಯಾರು ಗ್ರಾಮ ಪಂಚಾಯತಿನ ಆಶ್ರಯದಲ್ಲಿ ನಡೆದ ಈ ಜಾಗೃತಿ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ‌. ನಾಗೇಶ್ ಮಾತನಾಡಿ, ಕೊರೋನಾ ಸೋಂಕು ಹರಡದಂತೆ ತಡೆಯಲು ಮಾಸ್ಕ್ ಧಾರಣೆಯ ಅಗತ್ಯತೆಯನ್ನು ವಿವರಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ, ಕಾಂತಪ್ಪ ಗೌಡ, ಅಬ್ದುಲ್ ರೆಹಮಾನ್ ಪಡ್ಪು, ಮಡಂತ್ಯಾರು ರೋಟರಿ ಕ್ಲಬ್ಬಿನ‌ ನಿಯೋಜಿತ ಅಧ್ಯಕ್ಷ ಜಯಂತ್ ಶೆಟ್ಟಿ, ಸದಸ್ಯ ರಾಜೇಶ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಮಡಂತ್ಯಾರು ವಲಯ ಮೇಲ್ವಿಚಾರಕ ಆದಿತ್ಯ, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೈಯಕ್ತಿಕ ಅಂತರ ಕಾಪಾಡಿಕೊಂಡು ನಡೆದ ಈ ಕಾರ್ಯಕ್ರಮ ನಿಜ ಅರ್ಥದಲ್ಲಿ‌ ಕೊರೋನಾ ಸೋಂಕಿನ ವಿರುದ್ಧ ಜಾಗೃತಿ‌ ಮೂಡಿಸುವಂತಿತ್ತು.

Latest News

Related Posts