ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ
Facebook
Twitter
LinkedIn
WhatsApp

ಪೆಟ್ರೋಲ್-ಡೀಸಿಲ್ ಬೆಲೆಯನ್ನು ಅವೈಜ್ಞಾನಿಕವಾಗಿ ಮನಬಂದಂತೆ ಏರಿಕೆ ಮಾಡುವ ಕೇಂದ್ರ ಸರಕಾರದ ಜನವರೋಧಿ ನೀತಿಯನ್ನು ವಿರೋದಿಸಿ ಜೂನ್ 23ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಾಂಕೇತಕ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ನೀಡಲಾಯಿತು.
ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರ ಸಂಘ, ದ.ಕ. ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ, ಬೆಳ್ತಂಗಡಿ ತಾಲೂಕು ಋಣಮುಕ್ತ ಹೋರಾಟ ಸಮಿತಿ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಸಂಘಟನೆಗಳ ಪ್ರಮುಖರಾದ ಬಿ. ಎಂ. ಭಟ್, ಜಯರಾಮ ಮಯ್ಯ , ಲೋಕೇಶ್ ಕುದ್ಯಾಡಿ, ರಾಮಚಂದ್ರ, ಯುವರಾಜ್, ಸದಾಶಿವ ಎಸ್, ಗಣೇಶ ಪ್ರಸಾದ್, ಭವ್ಯ, ಅಧಿತಿ ಮೊದಲಾದವರು ಪಾಲ್ಗೊಂಡಿದ್ದರು.

Latest News

Related Posts