ನಾಳ ದೇಗುಲದಲ್ಲಿ ಭಕ್ತಾದಿಗಳ ಸಭೆ

ನಾಳ ದೇಗುಲದಲ್ಲಿ ಭಕ್ತಾದಿಗಳ ಸಭೆ
Facebook
Twitter
LinkedIn
WhatsApp

ಬಹುತೇಕ ಭಕ್ತರು‌ ಮಾಸ್ಕ್ ಮರೆತು ಬಂದರೂ, ವೈಯಕ್ತಿಕ ಅಂತರ ಕಾಪಾಡಲು ಮರೆಯಲಿಲ್ಲ

ಬೆಳ್ತಂಗಡಿ ತಾಲೂಕಿನ ಪ್ರಖ್ಯಾತ ದೇಗುಲಗಳಲ್ಲೊಂದಾದ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆಯ ಬಗ್ಗೆ ಭಕ್ತರ ಸಮಾಲೋಚನಾ ಸಭೆ ಜೂ.28 ರಂದು ದೇವಸ್ಥಾನದ ಆನ್ನ ಛತ್ರ ಸಭಾಂಗಣದಲ್ಲಿ ನಡೆಯಿತು.
ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಹಾಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಸಂತ ಮಜಲು ವಹಿಸಿದ್ದರು. ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆಗೆ ಸರಕಾರದಿಂದ ಬಂದಿರುವ ಸುತ್ತೋಲೆಯನ್ನು ದೇವಸ್ಥಾನದ ವ್ಯವಸ್ಥಾಪಕ ಗಿರೀಶ್ ಶೆಟ್ಟಿ ಸಭೆಯಲ್ಲಿ ವಾಚಿಸಿದರು. ನೂತನ ವ್ಯವಸ್ಥಾಪನಾ ಸಮಿತಿಗೆ 9 ಸದಸ್ಯರನ್ನು ಬೆಳ್ತಂಗಡಿ ಶಾಸಕರ ಶಿಫಾರಸ್ಸು ಮೇರೆಗೆ ಸೂಚಿಸಿ ಸರಕಾರದ ಅನುಮೋದನೆಗೆ ಕಳುಹಿಸಿ ಕೊಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ನ್ಯಾಯತರ್ಫು, ಕಳಿಯ ಮತ್ತು ಓಡಿಲ್ನಾಳ ಗ್ರಾಮಗಳ ಭಕ್ತಾಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ದೇಗುಲದ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

Latest News

Related Posts