ಕಳಚಿ ಬಿತ್ತು ಗೋಮುಖ ವ್ಯಾಘ್ರನ ಮುಖವಾಡ

Facebook
Twitter
LinkedIn
WhatsApp

ಕೋಳಿ ಹೆಸರಲ್ಲಿ ಗೋ ಸಾಗಾಟದ ಸಂಚು ಬಯಲು

ಕದ್ದ ಗೋ ಸಾಗಾಟಕ್ಕೆ ಬಳಸಲದ ನಕಲಿ ಪರ್ಮಿಟ್

ಬೆಳ್ತಂಗಡಿ: ಹಣೆಯಲ್ಲಿ ಭಜರಂಗಿಗಳನ್ನೂ ನಾಚಿಸುವ ರೀತಿಯಲ್ಲಿ ಉದ್ದದ ನಾಮ; ವಾಹನದಲ್ಲಿ ಮಂಗಳೂರು ಕಂಕನಾಡಿಯ ಅಬ್ದುಲ್ ಕರೀಮ್ ಮಾಲಕತ್ವದ ಪಿ. ಕೆ. ಚಿಕನ್ ಸೆಂಟರ್‌ ಹೆಸರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡಿದ ಅಗತ್ಯ ವಸ್ತು ಸಾಗಾಟದ ಅವಧಿ ಮೀರಿದ ಪರವಾನಿಗೆ; ವಾಹನದಲ್ಲಿ ಸಾಗಿಸುತ್ತಿದ್ದುದು ಮಾತ್ರ ಅಕ್ರಮವಾಗಿ ಅದೂ ಕದ್ದ ಗೋವುಗಳನ್ನು. ಸಾಗಾಟ ಮಾಡುತ್ತಿದ್ದುದು ಅಷ್ಟೇ ಅಮಾನುಷವಾಗಿ.
ಜುಲೈ 20ರ ಬೆಳಗ್ಗಿನ ಜಾವ ಮೂರು ಗಂಟೆಯ ಸುಮಾರಿಗೆ ಬೆಳ್ತಂಗಡಿ ತಾಲೂಕು ನಡ ಗ್ರಾಮದ ಸುರ್ಯ ಪಡ್ಪು ಎಂಬಲ್ಲಿ ಅಟೋ ಚಾಲಕ ನಾಮಧಾರಿ ರಾಜೇಶ್ ಎಂಬಾತ ತನ್ನ ಮನೆಯ ವಠಾರದಿಂದ ನಕಲಿ ಪರ್ಮಿಟ್‌ನ ಪಿಕ್‌ಅಪ್ ವಾಹನದಲ್ಲಿ ಮೂರು ಹಸು ಹಾಗೂ ಎರಡು ಕರುಗಳನ್ನು ಅಮಾನುಷವಾಗಿ ಹೇರಿಕೊಂಡು ಸಾಗಿಸಲು ಸಿದ್ಧನಾಗುತ್ತಿದ್ದಂತೆ; ಹೊಂಚು ಹಾಕಿ ಕುಳಿತ ಸ್ಥಳೀಯ ಭಜರಂಗದಳದ ಕಾರ್ಯಕರ್ತರು ವಾಹನಕ್ಕೆ ಅಡ್ಡ ಕಟ್ಟಿದಾಗ ಅಕ್ರಮ ಗೋ ಸಾಗಾಟಗಾರ ರಾಜೇಶ್ ಮತ್ತು ಆತನ ಸಹಚರರು ಕಳ್ಳ ಗೋ ಸಾಗಾಣಿಕೆಯ ಬೆಂಗಾವಲು ವಾಹನ ಆಲ್ಟೋದಲ್ಲಿ ಪರಾರಿಯಾದರು ಎನ್ನಲಾಗಿದೆ. ಅಕ್ರಮ ಗೋ ಸಾಗಾಟಕ್ಕೆ ಬಳಸಲಾದ ಪಿಕ್‌‌ಅಪ್ ವಾಹನ ಮತ್ತು ಹಸು-ಕರುಗಳನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಭಜರಂಗದಳದ ನೈತಿಕ ಪೊಲೀಸರು.
ಇದೇ ವೇಳೆ ಇವರದ್ದೇ ಇನ್ನೊಂದು ವಾಹನದಲ್ಲೂ ಹಸುಗಳ ಅಕ್ರಮ ಸಾಗಾಟ ಆಗುತ್ತಿದೆ ಎಂಬ ಮಾಹಿತಿ‌ ಕಲೆ ಹಾಕಿದ ಭಜರಂಗಿ ಯುವಕರು, ಗುರುವಾಯನಕೆರೆಯ ಸಮೀಪ ಈ ವಾಹನವನ್ನೂ ಅಡ್ಡ ಕಟ್ಟಿದರು. ಈ ಸಂದರ್ಭದಲ್ಲಿ ಭಜರಂಗಿಗಳಾದ ಗುರು ಹಾಗೂ ನಿತೀಶ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಗೋಕಳ್ಳರು; ಇವರಲ್ಲಿದ್ದ ಮೊಬೈಲ್ ಫೋನ್, ಚಿನ್ನದ ಸರ ಹಾಗೂ ಹಣದ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಭಜರಂಗದಳದ ಕಾರ್ಯಕರ್ತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಜರಂಗದಳದ ಯುವಕರ ಉದ್ಧೇಶ ಉತ್ತಮವಾದರೂ, ಅಕ್ರಮ ಗೋ ಸಾಗಾಟದ ಬಗ್ಗೆ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ, ಕಾನೂನು ಬದ್ಧವಾಗಿ ಕಾರ್ಯಾಚರಣೆ ನಡೆಸುವ ಬದಲಾಗಿ; ತಾವೇ ನೈತಿಕ ಪೊಲೀಸರಾಗಿ ಕಾನೂನನ್ನು ಕೈಗೆ ತೆಗೆದುಕೊಂಡು ಅಕ್ರಮ ನಡೆಯುವ ಸ್ಥಳಗಳಿಗೆ ದಾಳಿ ನಡೆಸುವುದು, ಅಕ್ರಮ ಗೋ ಸಾಗಾಟದ ವಾಹನಗಳನ್ನು ತಡೆಯಲು ಮುಂದಾಗುವುದು ಲಜ್ಜೆಗೆಟ್ಟ ಗೋ ಕಳ್ಳರಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಿದಂತಾಗುವುದು. ಮಾತ್ರವಲ್ಲ, ಪೊಲೀಸರನ್ನೂ ಅಡಕತ್ತರಿಯಲ್ಲಿ ಸಿಲುಕಿಸಿದಂತಾಗುತ್ತದೆ. ಇದು ಆಗದಂತಿರಲು ಭಜರಂಗಿಗಳು ನೈತಿಕ ಪೊಲೀಸ್‌ಗಿರಿ ಬಿಟ್ಟು, ಅಕ್ರಮಗಳ ಮಾಹಿತಿಯನ್ನು ಪೊಲೀಸರಿಗೆ ನೀಡಿ, ನಂತರ ನಡೆವ ಕಾರ್ಯಾಚರಣೆಯಲ್ಲಿ ಪೊಲೀಸರ ಜೊತೆ ಕೈಜೋಡಿಸುವಂತಾಗಲಿ.

Latest News

Related Posts