ಟಾಸ್ಕ್‌ಫೋರ್ಸ್ ಸದಸ್ಯರಿಗೆ ಆನ್‌ಲೈನ್ ತರಬೇತಿ

ಟಾಸ್ಕ್‌ಫೋರ್ಸ್ ಸದಸ್ಯರಿಗೆ ಆನ್‌ಲೈನ್ ತರಬೇತಿ
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಪ್ರತೀ ವಾರ್ಡ್ ಹಾಗೂ ಬೂತ್ ಮಟ್ಟದಲ್ಲಿ ಕೋರೋನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸುವಂತೆ ನೋಡಿ ಕೊಳ್ಳಲು ಚುನಾಯಿತ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು, ಸ್ವಯಂಸೇವಕರು ಹಾಗೂ ನೋಡಲ್ ಅಧಿಕಾರಿಗಳು ಒಳಗೊಂಡಂತೆ ಟಾಸ್ಕ್‌ಪೋರ್ಸ್ ಸಮಿತಿ ಗಳನ್ನು ರಚಿಸಲಾಗಿದ್ದು, ಸದರಿ ಸಮಿತಿಗಳ ಮುಖಾಂತರ ವಾರ್ಡ್‌ಗಳಲ್ಲಿ ಅಗತ್ಯ ಆರೋಗ್ಯ ಸೇವೆ ಹಾಗೂ ಇತರ ತುರ್ತು ಮಾಹಿತಿಗಳನ್ನು ನೀಡುವ ವಿಚಾರದಲ್ಲಿ ಎಲ್ಲಾ ಸ್ವಯಂಸೇವಕರಿಗೆ ಸರಕಾರದ ವತಿಯಿಂದ ಯೂಟ್ಯೂಬ್ ಮುಖಾಂತರ ಆನ್‌ಲೈನ್‌ನಲ್ಲಿ ಮಾಹಿತಿ ಹಾಗೂ ತರಬೇತಿಯನ್ನು ಜುಲೈ 20ರಂದು ಬೆಳ್ತಂಗಡಿಯ ಪಟ್ಟಣ ಪಂಚಾಯತ್ ಕಛೇರಿಯಲ್ಲಿ ನಡೆಸಲಾಯಿತು‌.
ಸದರಿ ತರಬೇತಿಯನ್ನು ಕೇಂದ್ರ ಸರಕಾರದ ಆರೋಗ್ಯ ಕಾರ್ಯದರ್ಶಿ ರವಿಕುಮಾರ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ. ಕಾವೇರಿ, ಆರ್ ಡಿ ಪಿ ಆರ್ ವಿಭಾಗದ ಕಾರ್ಯದರ್ಶಿ ಎಲ್. ಕೆ. ಅತೀಕ್ ನಡೆಸಿಕೊಟ್ಟರು.
ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಎಲ್ಲಾ 11 ವಾರ್ಡ್‌ಗಳಲ್ಲಿ ರಚಿಸಲಾದ ಟಾಸ್ಕ್‌ಫೋರ್ಸ್ ಸಮಿತಿಯ ಪದಾಧಿಕಾರಿಗಳು ಹಾಗೂ ಚುನಾಯಿತ ಸದಸ್ಯರು ಮಾತ್ರವಲ್ಲದೇ; ಮುಖ್ಯಾಧಿಕಾರಿ ಸುಧಾಕರ್ ಮತ್ತು ಸಿಬ್ಬಂದಿವರ್ಗದವರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಟ್ಟಣ ಪಂಚಾಯತ್‌ನ 11ಮಂದಿ ಚುನಾಯಿತ ಸದಸ್ಯರ ಪೈಕಿ ಕೇವಲ 5ಮಂದಿ ಮಾತ್ರ ಈ ಆನ್‌ಲೈನ್ ತರಬೇತಿಯಲ್ಲಿ ಭಾಗವಹಿಸಿದ್ದು; ಇಂತಹ ಸಂಕಷ್ಟದ ಸಂದರ್ಭದಲ್ಲೂ ಗೈರುಹಾಜರಾದ ಉಳಿದ ಸದಸ್ಯರಿಗೆ ತಮ್ಮ ವಾರ್ಡ್‌ನ ಮತದಾರರ ಬಗ್ಗೆ ಇರುವ ಕಾಳಜಿ ಎಷ್ಟೆಂದು ಪ್ರಶ್ನಿಸುವಂತಿತ್ತು. ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತರಬೇತಿ ನೀಡಲು ಸರಕಾರ ಆಯೋಜಿಸಿದ ಈ ಆನ್‌ಲೈನ್ ತರಬೇತಿ ಸಂದರ್ಭದಲ್ಲಿ ಭಾಗವಹಿಸಿದ ಕೆಲಮಂದಿ ಜವಾಬ್ದಾರಿಯುತರು, ತಮ್ಮ ಜವಾಬ್ದಾರಿ ಮರೆತು, ಮೊಬೈಲ್‌ನಲ್ಲಿ ವಾಟ್ಸಾಪ್ ನೋಡುತ್ತಾ ಕಾಲಹರಣ ಮಾಡುತ್ತಿದ್ದುದು ಕಂಡು ಬಂತು.

Latest News

Related Posts