ಬೆಳ್ತಂಗಡಿಯಲ್ಲಿ ಇಂದು 8ಮಂದಿಗೆ ಕೊರೋನಾ ದೃಢ

ಬಿಗ್ ಬ್ರೇಕಿಂಗ್ ನ್ಯೂಸ್  ಉಪ್ಪಿನಂಗಡಿಗೂ ವಕ್ಕರಿಸಿದ ಕೊರೋನಾ
Facebook
Twitter
LinkedIn
WhatsApp

ವೈದ್ಯಾಧಿಕಾರಿ ಹಾಗೂ ಮಗುವಿಗೂ ತಟ್ಟಿದ ಸೋಂಕು

ಬೆಳ್ತಂಗಡಿ ತಾಲೂಕಿನಲ್ಲಿ ಇಂದು 8ಮಂದಿಗೆ ಕೊರೋನಾ ಸೋಂಕು ಪಾಸಿಟಿವ್ ಬಂದಿದ್ದು; ಮಾಸ್ಕ್ ಧರಿಸದೇ, ವೈಯಕ್ತಿಕ ಅಂತರಕಾಪಾಡದೇ, ಅನಗತ್ಯ ಓಡಾಟ ನಡೆಸಿ ಕೊರೋನಾ ಸೋಂಕಿಗೇ ಸವಾಲು ಹಾಕುವ ದುಸ್ಸಾಹಸವನ್ನು ತಾಲೂಕಿನ ವೀರರು ಇನ್ನಾದರೂ ಕೈಬಿಡದಿದ್ದರೆ ; ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕೊರೋನಾ ಇನ್ನಷ್ಟು ಅಬ್ಬರಿಸಿ ಬೊಬ್ಬರಿಯಬಹುದು ಎಂಬ ಆತಂಕ ಜನಸಾಮಾನ್ಯರನ್ನು ಕಾಡತೊಡಗಿದೆ.
ಈ ನಡುವೆ ತಾಲೂಕಿನಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದ, ವೈದ್ಯರಿಗಿರಬೇಕಾದ ಸಹನೆ-ತಾಳ್ಮೆ-ಸೇವೆ ಸಹಿತ ಎಲ್ಲ ಗುಣಗಳನ್ನು ಹೊಂದಿದ್ದ ತಾಲೂಕಿನ ಯುವ ವೈದ್ಯಾಧಿಕಾರಿ ಹಾಗೂ ಅವರ ಪುಟ್ಟ ಕಂದಮ್ಮನಿಗೂ ಇಂದು ಕೊರೋನಾ ಸೋಂಕು ದೃಢವಾಗಿದ್ದು, ಇದು ತಾಲೂಕಿನ ವೈದ್ಯರ ಸಹಿತ ಎಲ್ಲ ಕೊರೋನಾ ವಾರಿಯರ್ಸ್‌ಗಳಲ್ಲಿ ಇನ್ನಷ್ಟು ಅತಂಕಕ್ಕೆ ಕಾರಣವಾಗಿದೆ.

Latest News

Related Posts