ನೆಮ್ಮದಿಯ ನಿಟ್ಟುಸಿರು ಬಿಟ್ಟ ವಾಹನ ಚಾಲಕರು

ಮೂಡುಬಿದರೆ: ಮೂಡುಬಿದಿರೆ ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಗೊಂಡು ಸಾಕಷ್ಟು ವರ್ಷಗಳು ಕಳೆದಿದೆ. ಆದರೂ ಇಲ್ಲಿನ ಪೇಟೆ ಜಂಕ್ಷನ್‌ನಲ್ಲಿ ಕಡಿದಾದ ತಿರುವಿನ ಬಳಿಯಿದ್ದ ಪೊಲೀಸ್ ಠಾಣೆಯ ಹಳೆಯ ಕಟ್ಟಡದ ತೆರವು ಕಾರ್ಯ ಪೊಲೀಸ್ ಇಲಾಖೆಯಿಂದ ನಡೆದಿರಲಿಲ್ಲ. ಮೂಡುಬಿದಿರೆ ಪುರಸಭಾ ಆಡಳಿತವೂ ಈ ವಿಚಾರದಲ್ಲಿ ದೀರ್ಘ ನಿದ್ರಾವಸ್ಥೆಯಲ್ಲಿತ್ತು.
ಇದೀಗ ಕೊರೋನಾ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆ ಲಾಕ್‌ಡೌನ್ ಆಗಿರುವುದರಿಂದ ವಾಹನ ಸಂಚಾರ ಒಂದಷ್ಟು ವಿರಳವಾಗಿರುವುದರ ಅವಕಾಶವನ್ನು ಬಳಸಿಕೊಂಡ ಪೊಲೀಸ್ ಇಲಾಖೆ ಜುಲೈ 21ರ ರಾತ್ರಿ ಕೊನೆಗೂ ತನ್ನ ಹಳೆಯ ಠಾಣಾ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿದ್ದಾರೆ. ಮೂಡುಬಿದಿರೆ ಪರಿಸರದ ವಾಹನ ಸವಾರರು ಮಾತ್ರವಲ್ಲ; ಇಲ್ಲಿ ಓಡಾಡುವ ಪಾದಾಚಾರಿಗಳು ಕೂಡಾ ವಿಳಂಬವಾದರೂ ಕೊನೆಗೂ ಹಳೆಯ ಮುರುಕಲು ಕಟ್ಟಡ ತೆರವುಗೊಳಿಸಿ, ಉಪಕರಿಸಿದ! ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸಬೇಕೆಂದಿದ್ದಾರೆ.







