70ಕೆ.ಜಿ. ಗೋಮಾಂಸ ಸಹಿತ ಆರೋಪಿ ಪೊಲೀಸ್ ವಶಕ್ಕೆ

ಬೆಳ್ತಂಗಡಿ: ಅಟೋವೊಂದರಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟವಾಗುತ್ತಿದ್ದುದನ್ನು ಕಂಡ ಸ್ಥಳೀಯ ಯುವಕರ ತಂಡ, ಅಟೋವನ್ನು ತಡೆದು ನಿಲ್ಲಿಸಿ, ಗೋಮಾಂಸ ಸಹಿತ ಅಟೋ ರಿಕ್ಷಾದೊಂದಿಗದ ಓರ್ವ ಆರೋಪಿಯನ್ನು ಬೆಳ್ತಂಗಡಿ ಪೊಲೀಸರಿಗೊಪ್ಪಿಸಿದ ಘಟನೆ ಜುಲೈ 27ರಂದು ಮಿತ್ತಬಾಗಿಲು ಗ್ರಾಮದ ಎರ್ಮಾಳ್ಪಲ್ಕೆಯಿಂದ ವರದಿಯಾಗಿದೆ.
ಸುಮಾರು 70 ಕೆಜಿ ಗೋಮಾಂಸವನ್ನು ರಿಕ್ಷಾದಲ್ಲಿ ಹೇರಿಕೊಂಡು ಕಾಜೂರು ಕಡೆಯಿಂದ ಎರ್ಮಾಳಪಲ್ಕೆ – ಕುಕ್ಕಾವು ರಸ್ತೆಯಾಗಿ ಬರುತ್ತಿದ್ದಾಗ ಮಾಹಿತಿ ಪಡೆದು ತಡೆದ ಯುವಕರು ಅಕ್ರಮ ಗೋಮಾಂಸ ಸಾಗಾಟದ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸುದಾಗ ಅಟೋ ರಿಕ್ಷಾದಲ್ಲಿ ಅಕ್ರಮ ಗೋಮಾಂಸದೊಂದಿಗೆ ಮಾರಕಾಸ್ತ್ರ ತಲವಾರ್ ಕೂಡಾ ಪತ್ತೆಯಸಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.







