ಶಿಶಿಲ: ಕಪಿಲಾ ನದಿಯಲ್ಲಿ ನೀರು ಹೆಚ್ಚಳ ಭೀತಿ: ಬೆಳ್ತಂಗಡಿ ಇ.ಓ ಸ್ಥಳಕ್ಕೆ ಭೇಟಿ.

ಶಿಶಿಲ: ಕಪಿಲಾ ನದಿಯಲ್ಲಿ ನೀರು ಹೆಚ್ಚಳ ಭೀತಿ: ಬೆಳ್ತಂಗಡಿ ಇ.ಓ ಸ್ಥಳಕ್ಕೆ ಭೇಟಿ.
Facebook
Twitter
LinkedIn
WhatsApp

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಮತ್ಸö್ಯಕ್ಷೇತ್ರ ಖ್ಯಾತಿಯ ಶಿಶಿಲ ದಲ್ಲಿ ಕಪಿಲಾ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಈ ಬಗ್ಗೆ ಸ್ಥಳೀಯರ ಮನವಿಯ ಮೇರೆಗೆ ಬೆಳ್ತಂಗಡಿ ತಾಲೂಕು ಇ.ಒ ಕುಸುಮಾಧರ್ ಶಿಶಿಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಪಿಲಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು ಯಾವುದೇ ಅನಾಹುತಗಳು ಸಂಭವಿಸದAತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳೀಯ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಈ ನಡುವೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರು ಇ.ಒ ರವರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಮುನ್ನೆಚ್ಚರಿಕೆ ಕ್ರಮವಾಗಿ ನೆರೆ ಪ್ರವಾಹ ಕಡಿಮೆಯಾಗುವವರೆಗೆ ಒಂದು ಹಿಟಾಚಿ ಯನ್ನು ಸ್ಥಳದಲ್ಲಿ ನಿಯೋಜಿಸಲು ಸೂಚಿಸಿದರು. ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಹಿಟಾಚಿ ಮೂಲಕ ಕಿಂಡಿ ಅಣೆಕಟ್ಟಿನಲ್ಲಿ ಜಮಾವಣೆಯಾದ ಮರದ ದಿಮ್ಮಿಗಳನ್ನು ತೆಗೆಯುವ ಕಾರ್ಯಕ್ಕೆ ಗ್ರಾಮ ಕರಣಿಕ ಪರಮೇಶ್, ಪಿಡಿಓ ಜಗದೀಶ್, ಉಪವಲಯ ಅರಣ್ಯಾಧಿಕಾರಿ ಪ್ರಶಾಂತ್, ಸಾರ್ಥ ನೀಡಿದರು. ಈ ಸಂದರ್ಬದಲ್ಲಿ ಧರ್ಮಸ್ಥಳ ಠಾಣೆಯ ಸಬ್ ಇನ್ಸ್ಪೆಕ್ಟರ್ ಪವನ್ ಕುಮಾರ್ ನಾಯಕ್ ಹಾಗೂ ಉಪ್ಪಿನಂಗಡಿ ಆರ್.ಎಫ್.ಓ ಸ್ಥಳಕ್ಕೆ ಭೇಟಿ ನೀಡಿದರು.

Latest News

Related Posts