ನಾಪತ್ತೆಯಾದ ಯುವಕ ಶವವಾಗಿ ಪತ್ತೆ

ನಾಪತ್ತೆಯಾದ ಯುವಕ ಶವವಾಗಿ  ಪತ್ತೆ
Facebook
Twitter
LinkedIn
WhatsApp

ಬೆಳ್ತಂಗಡಿ : ಚೆನ್ನರಾಯಪಟ್ಟಣದ ಖಾಸಗಿ ಸಂಸ್ಥೆಯೊಂದರಲ್ಲಿ ಮೇನೇಜರ್ ಆಗಿ
9 ದಿನಗಳ ಹಿಂದೆಯಷ್ಷೇ ಕೆಲಸಕ್ಕೆ ಸೇರಿದ್ದ; ತದನಂತರ ಏಕಾಏಕಿ ನಾಪತ್ತೆಯಾದ ಯುವಕನ ಶವ ತನ್ನ ನಾವೂರು ಮನೆಯ ಸಮೀಪ ಕೆರೆಯಲ್ಲಿ ಪತ್ತೆಯಾದ ಘಟನೆ ಆ.28 ರಂದು ವರದಿಯಾಗಿದೆ.
ನಾವೂರು ಗ್ರಾಮದ ನಾಗಜೆ ನಿವಾಸಿ ದಿ। ಶೀನಪ್ಪ ಗೌಡರ ಪುತ್ರ ರಕ್ಷಿತ್ (28) ಅಸಹಜವಾಗಿ ಸಾವನ್ನಪ್ಪಿದ ಯುವಕ.
ರಕ್ಷಿತ್ 9ದಿನಗಳ ಹಿಂದೆ ಚೆನ್ನರಾಯಪಟ್ಟಣಕ್ಕೆ ಹೋಗಿ ಕೆಲಸಕ್ಕೆ ಸೇರಿದ್ದು, ಕಳೆದ ಆ.22ರಂದು ಶನಿವಾರ ಮನೆಗೆ ಬಂದಿದ್ದರು. ಗಣೇಶ ಹಬ್ಬ ಪೂರೈಸಿದ ಬಳಿಕ ಆಗಸ್ಟ್ 24ರಂದು ಮತ್ತೆ ಕೆಲಸಕ್ಕಾಗಿ ಚೆನ್ನರಾಯಪಟ್ಟಣಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಡಿದ್ದರು. ಆಗಸ್ಟ್ 27ರಿಂದ ಅವರ ಮೊಬೈಲ್ ಸ್ವಿಚ್ ಆಫ್‌ ಆಗಿತ್ತು ಎನ್ನಲಾಗಿದೆ. ನಾವೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಗಣೇಶ್ ಗೌಡ ಹಾಗೂ ಮನೆಯಯವರು ರಕ್ಷಿತ್‌ರನ್ನು ಹುಡುಕಿಕೊಂಡು ಚನ್ನರಾಯಪಟ್ಟಣಕ್ಕೆ ತೆರಳಿದ್ದರು. ಈ ನಡುವೆ ಅವರ ಬೈಕ್ ಮನೆಯ ಕಾಡಿನ ಬಳಿ ಪತ್ತೆಯಾಗಿದ್ಧು, ಹುಡುಕಾಟಕ್ಕೆ ಹೋದವರು ಹಿಂತಿರುಗಿ ಬಂದಿದ್ದರು. ಆಗಸ್ಟ್ 28ರ ಬೆಳಿಗ್ಗೆ ಮನೆ ಹತ್ತಿರದ ಸಂಜೀವ ಗೌಡ ಕೋಡಿ ಎಂಬವರ ಕೆರೆಯಲ್ಲಿ ಶವ ಪತ್ತೆಯಾಗಿದೆ. ಸ್ಥಳದಲ್ಲಿ ವಿಷದ ಬಾಟಲಿ ಪತ್ತೆ ಯಾಗಿದ್ಧು, ರಕ್ಷಿತ್ ವಿಷ ಸೇವಿಸಿ, ಕೆರೆಗೆ ಹಾರಿ ಸಾವಿಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಮೃತ ರಕ್ಷಿತ್ ತಾಯಿ ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ

Latest News

Related Posts