ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ವಲಯದ ಆಶ್ರಯದಲ್ಲಿ ವಲಯ ಮಟ್ಟದ ಗೇರುಗಿಡ ವಿತರಣಾ ಕಾರ್ಯಕ್ರಮವು ಸರಕಾರಿ ಉನ್ನತೀಕರಿಸಿದ ಪ್ರೌಢ ಶಾಲೆ ಪೆರೋಡಿತ್ತಾಯಕಟ್ಟೆಯಲ್ಲಿ ಜರಗಿತು.
ವಲಯದ ಆಯ್ದ ಗೇರುಕೃಷಿ ರೈತ ಫಲಾನುಭವಿಗಳಿಗೆ ಲಾಭದಾಯಕ ಗೇರುಕೃಷಿಯ ನಾಟಿ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವ್ಯಾಪ್ತಿಯ ನಿರ್ದೇಶಕರಾದ ವಸಂತ್ ಸಾಲ್ಯಾನ್ ನೆರವೇರಿಸಿದರು. ಗ್ರಾಮಾಭಿವೃದ್ಧಿ ಯೋಜನೆ ನಡೆದು ಬಂದ ದಾರಿ ಮತ್ತು ಕೃಷಿ ಕುಟುಂಬಕ್ಕೆ ಯೋಜನೆಯ ಮೂಲಕ ನೀಡುತ್ತಿರುವ ಕಾರ್ಯಕ್ರಮದ ಬಗ್ಗೆ ಸವಿವರವಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಮಾತನಾಡಿ ಗೇರುಕೃಷಿಯನ್ನು ಸರಿಯಾಗಿ ಆರೈಕೆ ಮಾಡಿದ್ದಲ್ಲಿ ಆದಾಯ ಹೆಚ್ಚಿಸಬಹುದು ಎಂದರು. ಹಾಗೂ ನಾಟಿ ಮಾಡುವಾಗ ಅನುಸರಿಸಬೇಕಾದ ವಿಧಾನವನ್ನು ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ತೆಂಕಕಾರಂದೂರುನ ಮುಖ್ಯೋಪಾಧ್ಯಾಯಿನಿ ಪದ್ಮಾವತಿ, ಜನಜಾಗೃತಿ ವಲಯ ಅಧ್ಯಕ್ಷ ಕಾಸಿಂ, ಯೋಜನಾಧಿಕಾರಿ ಯಶವಂತ್ ಎಸ್., ಒಕ್ಕೂಟ ಅಧ್ಯಕ್ಷರುಗಳಾದ ಶರತ್ ಮತ್ತು ಯೋಗೀಶ್ ಉಪಸ್ಥಿತರಿದ್ದರು. ಕೃಷಿ ಮೇಲ್ವಿಚಾರಕರಾದ ಬಾಸ್ಕರ್ ಸ್ವಾಗತಿಸಿದರು. ಮೇಲ್ವಿಚಾರಕರಾದ ದಿನೇಶ್ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.






