ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪಾದುಕಾನ್ಯಾಸ.

ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪಾದುಕಾನ್ಯಾಸ.
Facebook
Twitter
LinkedIn
WhatsApp

ಬೆಳ್ತಂಗಡಿ: ರೆಖ್ಯ ಗ್ರಾಮದ ಕೋಲಾರು ಶ್ರೀ ದುರ್ಗಾರಮೇಶ್ವರೀ ದೇವಸ್ಥಾನದಲ್ಲಿ ಅಕ್ಟೋಬರ್ 19ರಂದು ಪಾದುಕಾನ್ಯಾಸ ಕಾರ್ಯಕ್ರಮವು ಶಾಸಕ ಹರೀಶ್ಮ ಪೂಂಜರ ನೇತೃತ್ವದಲ್ಲಿ ನಡೆಯಿತು
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರಾಮಯ್ಯ ಗೌಡ ಕೋಲಾರು, ದೇಗುಲದ ಅನುವಂಶಿಕ ಮೊಕ್ತೆಸ್ಥರರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ರಾಘವೇಂದ್ರ ನಾಯಕ್, ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಸಿನಮಕ್ಕಿ; ಕುಶಾಲಪ್ಪಗೌಡ ಪಾಪುದಮಂಡೆ, ಅಧ್ಯಕ್ಷರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (ರಿ) ಕೋಲಾರು; ಮಂಜುನಾಥ ಗೌಡ ಕೈಕುರೆ, ಅಧ್ಯಕ್ಷರು, ಜೀರ್ಣೋಧ್ಧಾರ ಸಮಿತಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೋಲಾರು; ಶೀನಪ್ಪ ರೈ ಬಳ್ಳಾಲ್‌ಗುತ್ತು; ರಾಧಾಕೃಷ್ಣ ಗೌಡ, ಕಾರ್ಯದರ್ಶಿ, ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ, ಅಡೆಂಜ; ಪ್ರಶಾಂತ್ ಭಟ್ ಅರ್ಚಕರು,ಈಶ್ವರ್ ಚಂದ್ರ ಶಿಲ್ಪಿಗಳು ಭಾಗವಹಿಸಿದ್ದರು. ಪದ್ಮುಂಜ ಪ್ರಾಥಮಿಕ‌ ಕೃಷೊ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣಿಕ್ಕೆರ, ಬಾಲಕೃಷ್ಣ ಗೌಡ ಮುಗೇರಡ್ಕ, ಸುದೀರ್ ಭಟ್, ರತೀಶ್ ಬೇಂಗಳ, ನವೀನ್ ಕೆ. ರೆಖ್ಯ ಉಪಸ್ಥಿತರಿದ್ದರು. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮತ್ತು ಜೀರ್ಣೋದ್ಧಾರ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು. ವಸಂತಗೌಡ ಸ್ವಾಗತಿಸಿದರು ಯು. ಆರ್. ನಾರಾಯಣಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿದರು ಕಾರ್ಯಕ್ರಮದ ನಿರೂಪಣೆಯನ್ನು ಚೇತನ್ ಪಿ. ಕೆ. ಯವರು ಮಾಡಿದರು. ಕೊನೆಯಲ್ಲಿ ಪವಿತ್ರ ವಂದಿಸಿದರು.

Latest News

Related Posts