ಬೆಳ್ತಂಗಡಿ: ಅಳದಂಗಡಿಯ ಶ್ರೀ ಗುರು ಸಭಾಭವನದಲ್ಲಿ ಅಕ್ಟೋಬರ್ 26ರಂದು ನಡೆದ ಸತತ 37 ವರುಷ ಸೇವೆ ಸಲ್ಲಿಸಿ ಅಕ್ಟೋಬರ್ 31ರಂದು ನಿವೃತ್ತ ರಲ್ಲಿರುವ ಶಿರ್ಲಾಲಿನ ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಎಚ್. ನಿತ್ಯಾನಂದ ಶೆಟ್ಟಿ ನೊಚ್ಚರ ಅಭಿನಂದನಾ ಸಮಾರಂಭದಲ್ಲಿ ಅಳದಂಗಡಿಯ ‘ನಮ ಮಾತೆರ್ಲ ಒಂಜೇ ಕಲಾತಂಡ’ದವರಿಂದ ನೊಚ್ಚ ಶೆಟ್ಟರಿಗೆ ಕಲಾತಂಡದ ಪ್ರತಿ ಕಾರ್ಯಕ್ರಮಕ್ಕೆ ನಿರಂತರ ಸಹಕಾರ ನೀಡಿದಕ್ಕಾಗಿ ನೆನಪಿನ ಕಾಣಿಕೆ ನೀಡಿ ತಂಡದ ವತಿಯಿಂದ ಗೌರವಿಸಲಾಯಿತು.ಈ ಸಮಯದಲ್ಲಿ ತಂಡದ ಅಧ್ಯಕ್ಷರಾದ ರವಿಪೂಜಾರಿ ಸುಲ್ಕೇರಿಮೊಗ್ರು, ಉಪಾಧ್ಯಕ್ಷ ಮುಖೀಮ್ ಖಾನ್ ಪಿಲ್ಯ, ತಂಡದ ಸಲಹೆಗಾರಾದ ದರ್ಶನ್ ಶೆಟ್ಟಿ ಅರುವ, ಕಿರಣ್ ಕುಮಾರ್ ಜ್ಯೋತಿಕಾ ಸ್ಟುಡಿಯೋ ಅಳದಂಗಡಿ ಹಾಗೂ ಹಿತೇಶ್ ಬೇಕಲ್ಕಟ್ಟೆ ಮತ್ತಿತರರು ಹಾಜರಿದ್ದರು.






