ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ರಿಕ್ಷಾ ಮಾಲಕ ಹಾಗೂ ಚಾಲಕರ ಸಂಘ ಉಜಿರೆ ಇವರ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 24ರಂದು ವಿಶ್ವ ಪೋಲಿಯೋ ದಿನಾಚರಣೆಯನ್ನು ಉಜಿರೆಯ ಕೃಷ್ಣಾನುಗ್ರಹ ಸಭಾಂಗಣದ ಆವರಣದಲ್ಲಿ ನಡೆಸಲಾಯಿತು.
ಈ ಸಂಧರ್ಭದಲ್ಲಿ ರೋಟರಿ ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ಸಿಂಹ ನಾಯಕ್, ರೋಟರಿ ಜಿಲ್ಲೆಯ ಪಲ್ಸ್ ಪೋಲಿಯೊದ ಸಹಾಯಕ ಚೇರ್ಮನ್ ಸುರೇಂದ್ರ ಕಿಣಿ, ರೋಟರಿ ಕ್ಲಬ್ ಬೆಳ್ತಂಗಡಿಯ ಪಲ್ಸ್ ಪೋಲಿಯೊ ಚೇರ್ಮನ್ ಡಾ. ರಾಘವೇಂದ್ರ ಪಿದಮಲೆ, ರೋಟರಿ ಕ್ಲಬ್ ಬೆಳ್ತಂಗಡಿಯ ನಿಯೋಜಿತ ಅಧ್ಯಕ್ಷರ ಶರತ್ಕೃಷ್ಣ ಪಡುವೆಟ್ನಾಯ, ಹಾಗೂ ರಿಕ್ಷಾ ಮಾಲಕ ಚಾಲಕರ ಸಂಘದ ಅಧ್ಯಕ್ಷ ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರ್ ಅವರ ಪ್ರಾರ್ಥನೆ ಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಬಿ. ಕೆ. ಧನಂಜಯ ರಾವ್ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುರೇಂದ್ರ ಕಿಣಿಯವರು ಪೋಲಿಯೊ ನಿರ್ಮೂಲನೆಯಲ್ಲಿ ರೋಟರಿ ಯ ಪಾತ್ರ ಹಾಗೂ ಜವಾಬ್ದಾರಿಯನ್ನು ವಿವರಿಸಿದರು.
ನಂತರ ಮಾತನಾಡಿದ ರೊ ಪ್ರತಾಪ್ಸಿಂಹ ನಾಯಕ್ ಅವರು ಪೋಲಿಯೋ ನಿರ್ಮೂಲನೆ ಮಾಡುವಲ್ಲಿ ರೋಟರಿಯೊಂದಿಗೆ ರಿಕ್ಷಾ ಚಾಲಕರೂ ಕೈ ಜೋಡಿಸುವಂತೆ ಕೇಳಿಕೊಂಡರು. ಈ ಸಂಧರ್ಭದಲ್ಲಿ ಪೋಲಿಯೋ ನಿರ್ಮೂಲನೆ ಮಾಡುವ ಬಗ್ಗೆ ಸ್ಟಿಕ್ಕರ್ ಒಂದನ್ನು ಬಿಡುಗಡೆಗೊಳಿಸಿ ರಿಕ್ಷಾ ಚಾಲಕರಿಗೆ ನೀಡಲಾಯಿತು. ನಂತರ ಉಜಿರೆಯ ಹಿರಿಯ ರಿಕ್ಷಾ ಚಾಲಕರಾದ ಬಾಬು ಗೌಡ ಅವರನ್ನು ಸನ್ಮಾನಿಸಲಾಯಿತು. ರಿಕ್ಷಾ ಚಾಲಕರ ನಾಲ್ಕು ಜನ ಮಕ್ಕಳಿಗೆ ಕಲಿಕೆಗಾಗಿ ಪ್ರೋತ್ಸಾಹ ಧನವನ್ನು ಕೊಡಲಾಯಿತು. ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ರೂಪಾಯಿ16100 ( 225 ಡಾಲರ್)ವನ್ನು ಪೋಲಿಯೋ ನಿರ್ಮೂಲನೆಗಾಗಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಗೆ ದೇಣಿಗೆಯಾಗಿ ನೀಡಲಾಯಿತು. ಆಗಮಿಸಿದ್ದ ರಿಕ್ಷಾ ಚಾಲಕರಿಗೆ ರೋಟರಿ ಕ್ಲಬ್ ವತಿಯಿಂದ ಫೇಸ್ ಮಾಸ್ಕ್ ಗಳನ್ನು ನೀಡಲಾಯಿತು. ರೋಟರಿ ಕ್ಲಬ್ ಕಾರ್ಯದರ್ಶಿ ಶ್ರೀಧರ ಕೆ. ವಿ. ವಂದಿಸಿದರು






