ಬೆಳ್ತಂಗಡಿ: ಬೆಳ್ತಂಗಡಿ ತೋಟಗಾರಿಕಾ ಇಲಾಖಾ ಕಛೇರಿಯ ನೂತನ ಕಟ್ಟಡವನ್ನು ನವೆಂಬರ್ 4ರಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ಸಿಂಹ ನಾಯಕ್, ಬೆಳ್ತಂಗಡಿ ತಾಲೂಕು ಪಂಚಾಯತ್ ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ, ಸದಸ್ಯರಾದ ಕೊರಗಪ್ಪ ನಾಯ್ಕ ಹಾಗೂ ಸೌಮ್ಯಲತಾ ಜಯಂತ್ ಗೌಡ, ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಶಶಿಧರ ಕಲ್ಮಂಜ, ಸದಸ್ಯರಾದ ವಿಜಯ ಗೌಡ ಹಾಗೂ ಲಕ್ಷ್ಮೀನಾರಾಯಣ, ಮಾಜಿ ಸದಸ್ಯ ಬಾಲಕೃಷ್ಣ ಸಾಲಿಗ್ರಾಮ, ತೋಟಗಾರಿಕಾ ಇಲಾಖಾ ಪ್ರಮುಖರಾದ ಎಚ್. ಆರ್. ನಾಯ್ಕ್, ಎಚ್. ಎಸ್. ಚಂದ್ರಶೇಖರ್, ಶಿವಪ್ರಕಾಶ್, ಸಂಜೀವ, ಲಿಖಿತ್ರಾಜ್ ಮತ್ತಿತರರು ಉಪಸ್ಥಿತರಿದ್ದರು.






