ವೇಣೂರು: ಐತಿಹಾಸಿಕ ಕ್ಷೇತ್ರವಾದ ವೇಣೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಊರ ಪರವೂರ ಭಕ್ತರ-ದಾನಿಗಳ ಸಹಕಾರದಿಂದ ದೇಗುಲದ ಜೀರ್ಣೋದ್ಧಾರ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು; ನವೆಂವರ್ 4ರಂದು ತನ್ನ ತಾಯಿ ಚಂದ್ರಾವತಿಯವರೊಂದಿಗೆ ದೇಗುಲಕ್ಕೆ ಭೇಟಿ ನೀಡಿದ ಆರಂಬೋಡಿ ಗ್ರಾಮದ ಪ್ರಗತಿಪರ ಕೃಷಿಕರಾದ ಕಾಮದೇನು ನಿಲಯ ಮಂಜಿಲ ವಸಂತ ಪೂಜಾರಿಯವರು ದೇಗುಲದ ಜೀರ್ಣೋದ್ಧಾರ ಕಾಮಗಾರಿಗೆ ತಾನು ಕೊಡಲು ನಿಶ್ಚಯಿಸಿದ 1ಲಕ್ಷ ರೂಪಾಯಿ ದೇಣಿಗೆಯಲ್ಲಿ ಕೊನೆಯ ಕಂತಿನ ಮೊತ್ತ ರೂಪಾಯಿ 25,000/-ವನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್ರಿಗೆ ಹಸ್ತಾಂತರಿಸಿದರು. ದೇಗುಲದ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳಾದ ಅಶೋಕ್ ಪಾಣೂರು, ರಾಜೇಶ್ ಕುಮಾರ್ ಮೂಡುಕೋಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.






