ಹಾಡುಗಾರಿಕಾ ಸ್ಪರ್ಧೆ ‘ಪ್ರಕಾಶ್ ಗಾನಾಂಜಲಿ’

ಹಾಡುಗಾರಿಕಾ ಸ್ಪರ್ಧೆ ‘ಪ್ರಕಾಶ್ ಗಾನಾಂಜಲಿ’
Facebook
Twitter
LinkedIn
WhatsApp

‘ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್‌ನ ಆಶ್ರಯದಲ್ಲಿ ರೋಟರಿ ವಲಯ 4ರ ಕ್ಲಬ್‌ಗಳ ಸದಸ್ಯರಿಗಾಗಿ ಹಾಡುಗಾರಿಕಾ ಸ್ಪರ್ಧೆ ‘ಪ್ರಕಾಶ ಗಾನಾಂಜಲಿ’ ಲಾಯ್ಲದ ಸುಬ್ರಹ್ಮಣ್ಯ ಸದನದಲ್ಲಿ ನವೆಂಬರ್ 8ರಂದು ನಡೆಯಿತು.ರೋಟರಿ ಜಿಲ್ಲೆ 3181-ವಲಯ 4ರ 10 ಕ್ಲಬ್‌ಗಳ ಸದಸ್ಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಇತ್ತೀಚೆಗೆ ವಿಧಿವಶರಾದ ಬೆಳ್ತಂಗಡಿ ರೋಟರಿ ಕ್ಲಬ್ ಸದಸ್ಯ ಸ್ವತಹ ಉತ್ತಮ ಗಾಯಕರಾದ ಪ್ರಕಾಶ್ ತುಳುಪುಳೆಯವರ ನೆನಪಿನಲ್ಲಿ ಈ ಸ್ಪರ್ಧೆಯನ್ನು ಅಯೋಜಿಸಿ ಇದಕ್ಕೆ ಪ್ರಕಾಶ ಗಾನಂಜಲಿ ಎಂದು ಹೆಸರಿಸಲಾಗಿತ್ತು‌. ಕಾರ್ಯಕ್ರಮವನ್ನು ದಿವಂಗತ ಪ್ರಕಾಶ ತುಳುಪುಳೆಯವರ ಸಹೋದರ ಡಾl ಎನ್. ಎಂ. ತುಳುಪುಳೆಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ರೋಟರಿ ಜಿಲ್ಲೆ ಯ ಸಿಂಗಿಂಗ್ ಐಡಲ್ ಚೇರ್ಮನ್ ವಿ. ಜೆ. ಫರ್ನಾಂಡೀಸ್, ಜೋನಲ್ ಲೆಫ್ಟಿನೆಂಟ್ ಮೋನಪ್ಪ ಪೂಜಾರಿ ಕಂಡೆಂತ್ಯಾರು, ಬೆಳ್ತಂಗಡಿ ರೋಟರಿಯ ಪೂರ್ವಾಧ್ಯಕ್ಷರಾದ ಡಾl ಶಶಿಧರ ಡೋಂಗ್ರೆ, ಕ್ಲಬ್‌ನ ನಿಯೋಜಿತ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಹಾಗೂ ಕ್ಲಬ್‌ನ ಸೇವಾ ಚಟುವಟಿಕೆಗಳ ನಿರ್ದೇಶಕರಾದ ಯೋಗೀಶ್ ಭಿಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕ್ಲಬ್‌ನ ಅಧ್ಯಕ್ಷ ಬಿ. ಕೆ. ಧನಂಜಯ ರಾವ್ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಈ ಸಂಧರ್ಭದಲ್ಲಿ ಉಜಿರೆಯ ರವಿಚಂದ್ರ ಚಕ್ಕಿತ್ತಾಯ, ಅರವಿಂದ ಕಾರಂತ, ವಿವೇಕ, ಸಂಪತ್ ಆರಿಗ, ಸುಹಾಸ್ ಕುಮಾರ್ ಎಸ್ ಹಾಗೂ ಬೆಳ್ತಂಗಡಿಯ ರೊನಾಲ್ಡೊ ಲೋಬೋ ಅವರನ್ನು ರೋಟರಿ ಕ್ಲಬ್‌ಗೆ ಸೇರಿಸಿಕೊಳ್ಳಲಾಯಿತು. ಈ ಸ್ಪರ್ಧೆಗೆ ಗಾಯಕರಾದ ಸುಬ್ರಹ್ಮಣ್ಯ, ರಜತ್ ಮಯ್ಯ ಹಾಗೂ ಸ್ವರ್ಣ ಕುಮಾರಿ ನಿರ್ಣಾಯಕರಾಗಿ ಸಹಕರಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಕ್ಲಬ್‌ನ ಕಾರ್ಯದರ್ಶಿ ಶ್ರೀಧರ ಕೆ. ವಿ. ವಂದಿಸಿದರು

Latest News

Related Posts