ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್ ವಲಯ 8ರ ಬೆಳ್ತಂಗಡಿ ಶಾಖೆಯ 2020-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರತ್ನತ್ರಯ ಸಭಾಭವನದಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಲಯದ ಉಪಾದ್ಯಕ್ಷ ವೀರ್ ಬಿ. ಸುದರ್ಶನ್ ಜೈನ್ ಮಾತನಾಡಿ, ಜೈನ್ ಮಿಲನ್ ಕಾರ್ಯಕ್ರಮಗಳ ಕುರಿತು ಮಾರ್ಗದರ್ಶನ ನೀಡಿದರು. ವಲಯ 8ರ ನಿರ್ದೇಶಕ ವೀರ್ ಬಿ. ಸೋಮಶೇಖರ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಕರ್ತವ್ಯಗಳ ಬಗ್ಗೆ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಬೆಳ್ತಂಗಡಿ ಜೈನ್ ಮಿಲನ್‌ನ ಅಧ್ಯಕ್ಷ ವೀರ್ ಪಾರ್ಶ್ವನಾಥ್ ಜೈನ್ ವಹಿಸಿದ್ದರು.ನೂತನ ಅಧ್ಯಕ್ಷರಾಗಿ ವೀರ್ ಎನ್. ಶಾಂತಿರಾಜ್ ಜೈನ್, ಕಾರ್ಯದರ್ಶಿಯಾಗಿ ವೀರ್ ಸಂಪತ್ ಕುಮಾರ್, ಉಪಾಧ್ಯಕ್ಷರಾಗಿ ವೀರ್ ಕೆ. ಉದಯ್ ಕುಮಾರ್ ಕಂಬಳಿ, ವೀರ್ ಸಿದ್ಧಾಂತ ಕೀರ್ತಿರಾಜ್, ವೀರಾಂಗನಾ ಶಕುಂತಳಾ, ಜೊತೆ ಕಾರ್ಯದರ್ಶಿಯಾಗಿ ವೀರ್ ಅಜಯ್ ಕುಮಾರ್ ಜೈನ್, ಕೋಶಾಧಿಕಾರಿಯಾಗಿ ವೀರ್ ನಿಖಿತ್ ಜೈನ್ ಧರ್ಮಸ್ಥಳ ಪ್ರಮಾಣ ವಚನ ಸ್ವೀಕರಿಸಿದರು.ಗೌರವ ಸಲಹೆಗಾರರಾಗಿವೀರ್ ಅನಂತ್ರಾಜ್ ಜೈನ್, ವೀರ್ ಬಿ. ಭುಜಬಲಿ, ವೀರ್ ಎನ್. ಜೀವಂಧರ್ ಕುಮಾರ್, ವೀರಾಂಗನಾ ತ್ರಿಶಲಾ ಜೈನ್, ವೀರ್ ದಿನೇಶ್ ಚೌಟ, ವೀರ್ ಎಸ್. ಸತೀಶ್ಚಂದ್ರ ಆಯ್ಕೆಯಾದರು.ಕಾರ್ಯಕ್ರಮದಲ್ಲಿ ವೀರ್ ಪ್ರವೀಣ್ ಕುಮಾರ್ ಇಂದ್ರ, ವೀರ್ ಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಬೆಳ್ತಂಗಡಿ ಜೈನ್ ಮಿಲನ್‌ನ ಕಾರ್ಯದರ್ಶಿ ವೀರ್ ಬಿ. ಮುನಿರಾಜ್ ಅಜ್ರಿ ಕಾರ್ಯಕ್ರಮ ನಿರೂಪಿಸಿದರು. ಸಂಪತ್ ಕುಮಾರ್ ವಂದಿಸಿದರು.






