ಬಿಗ್ ಬ್ರೇಕಿಂಗ್ ನ್ಯೂಸ್

ಬಿಗ್ ಬ್ರೇಕಿಂಗ್  ನ್ಯೂಸ್
Facebook
Twitter
LinkedIn
WhatsApp

ಬೆಳ್ತಂಗಡಿ ಪೇಟೆಯಲ್ಲಿ ಸ್ಪೋಟಿಸಿದ ಕೆಂಪು ಪಟಾಕಿ

ಬೆಳ್ತಂಗಡಿ: ರಾಜ್ಯ ಸರಕಾರವೇನೋ ಒಮ್ಮೆ ಈ ಬಾರಿಯ ದೀಪಾವಳಿಗೆ ಪಟಾಕಿ ನಿಷೇಧಿಸಿತು. ನಂತರ ಹಸಿರು ಪಟಾಕಿಗೆ ಹಸಿರು ನಿಶಾನೆ ತೋರಿಸಿತು. ಜನಸಾಮಾನ್ಯರು ಈ ಹಸಿರು ಪಟಾಕಿ ಏನು ಎಂಬುದರ ಬಗ್ಗೆಯೇ ಗೊಂದಲದಲ್ಲಿದ್ದಾರೆ. ಪಟಾಕಿ ಮಾರಾಟಗಾರರು ಈಗಾಗಲೇ ದಾಸ್ತಾನಿರಿಸಿ, ಮಾರಾಟಕ್ಕೆ ಸಿದ್ಧ ಪಡಿಸಿದ ಪಟಾಕಿ ಯಾವುದು? ಹಸಿರು ಪಟಾಕಿ ಯಾವಾಗ ಬರ್ತದೆ? ಹಸಿರು ಪಟಾಕಿ ಹ್ಯಾಗಿರ್ತದೆ? ಯಾವುದಕ್ಕೂ ಸ್ಪಷ್ಟತೆ ಇಲ್ಲ.ಈ ನಡುವೆ ನವೆಂಬರ್ 11ರ ರಾತ್ರಿ ಬೆಳ್ತಂಗಡಿ ಪೇಟೆಯಲ್ಲಿ ಮೂರ್ನಾಲ್ಕು ಬಾರಿ ‘ಢಂ’ ‘ಢಂ’ ಎಂದು ಪಟಾಕಿ ಸದ್ದು ಜೋರಾಗಿ ಕೇಳಿದ್ದು, ಜೋರಾಗಿ ಸದ್ದು ಮಾಡೋದು ಹಸಿರು ಪಟಾಕಿಯಾ…ನೀಲಿ ಪಟಾಕಿಯಾ….ಕೆಂಪು ಪಟಾಕಿಯಾ….ಅಥವಾ ಇದಕ್ಕೆ ಬೇರೆಯೇ ಹೆಸರಿದೆಯಾ ಎಂಬ ಬಗ್ಗೆ ಸಂಬಂಧಿತ ಇಲಾಖಾಧಿಕಾರಿಗಳು ಸ್ಪಷ್ಟೀಕರಿಸಬೇಕಾಗಿದೆ. ಒಟ್ಟಿನಲ್ಲಿ ದೀಪಾವಳಿ ಹಬ್ಬ ಮುಗಿದರೂ ಈ ಬಾರಿ ಪಟಾಕಿ ಗೊಂದಲ ಮಾತ್ರ ನಿವಾರಣೆಯಾಗಲಿಕ್ಕಿಲ್ಲ.

Latest News

Related Posts