ಗ್ರಾಹಕರ ಪ್ರೀತಿಗೆ ಪಾತ್ರವಾದ ಕಥೋಲಿಕ್ ಸೊಸೈಟಿ;ಅಳದಂಗಡಿಯ ಸ್ಥಳಾಂತರಿತ ಶಾಖೆಯನ್ನು ಉದ್ಘಾಟಿಸಿ ಶಾಸಕ ಪೂಂಜ

ಗ್ರಾಹಕರ ಪ್ರೀತಿಗೆ ಪಾತ್ರವಾದ ಕಥೋಲಿಕ್ ಸೊಸೈಟಿ;ಅಳದಂಗಡಿಯ ಸ್ಥಳಾಂತರಿತ ಶಾಖೆಯನ್ನು ಉದ್ಘಾಟಿಸಿ ಶಾಸಕ ಪೂಂಜ
Facebook
Twitter
LinkedIn
WhatsApp

ಬೆಳ್ತಂಗಡಿ: ತನ್ನ ಆರ್ಥಿಕ ಚಟುವಟಿಕೆಗಳ ಮೂಲಕ ಗ್ರಾಹಕರಿಗೆ ಸಕಾಲದಲ್ಲಿ ಸ್ಪಂದಿಸಿ, ಗ್ರಾಹಕರಲ್ಲಿ ವಿಶ್ವಾಸ ಮೂಡಿಸಿರುವ ಬೆಳ್ತಂಗಡಿಯ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಗ್ರಾಹಕರ ಪ್ರೀತಿಗೆ ಪಾತ್ರವಾಗಿ ಎತ್ತರಕ್ಕೆ ಬೆಳೆಯುತ್ತಿದೆ ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಎಪ್ರಿಲ್ 26ರಂದು ಅಳದಂಗಡಿಯ ಎಜಿಎಸ್ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡ ಬೆಳ್ತಂಗಡಿಯ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಅಳದಂಗಡಿ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಅಳದಂಗಡಿ ಸಂತ ಪೀಟರ್ ಕ್ಲೆವರ್ ಚರ್ಚ್‌ನ ಧರ್ಮಗುರು ವಂದನೀಯ ನವೀನ್ ಪಿಂಟೊ ಆಶೀರ್ವಚನ ನೀಡುತ್ತಾ, ದುಡಿಮೆಗೆ ಪ್ರತಿಫಲ ಅಪೇಕ್ಷಿಸುವುದು ಸಾಮಾನ್ಯ. ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮಾಡಿದಾಗ ಉತ್ತಮ ಪ್ರತಿಫಲ ದೊರೆಯುತ್ತದೆ. ಜಾತಿ-ಮತ-ಧರ್ಮಗಳ ಭೇದವಿಲ್ಲದೇ ಸೇವಾ ಮನೋಭಾವದಿಂದ ಮುನ್ನಡೆಯುತ್ತಿರುವ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಭದ್ರತಾ ಕೊಠಡಿ ಉದ್ಘಾಟಿಸಿದರು. ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿರುವ ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಲೋಶಿಯಸ್ ಎಸ್. ಲೋಬೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯಾ ಹರಿಪ್ರಸಾದ್, ಸದಸ್ಯ ಪ್ರಶಾಂತ್ ವೇಗಸ್, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ಅಳದಂಗಡಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಲಾರೆನ್ಸ್ ಪಾಯ್ಸ್, ಹಿರಿಯ ಸಹಕಾರಿ ಫಿಲಿಪ್ ರೋಡ್ರಿಗಸ್, ಸಂಸ್ಥೆಯ ಉಪಾಧ್ಯಕ್ಷ ಜ್ಹೋನ್ ಅರ್ವಿನ್ ಡಿ’ಸೋಜಾ, ನಿರ್ದೇಶಕರಾದ ಲಾರೆನ್ಸ್ ಡೇಸಾ, ಅಲ್ಫೋನ್ಸ್ ಫ್ರಾಂಕೊ, ಲಾರೆನ್ಸ್ ಡಿ’ಸೋಜಾ, ಜೋಸ್ಫಿನ್ ಪಿಂಟೊ, ವಿನ್ಸೆಂಟ್ ರೋಡ್ರಿಗಸ್, ರುಡಾಲ್ಫ್ ಡಿ’ಸೋಜಾ, ಆ್ಯಗ್ನೆಸ್ ಜುಲಿಯಾನಾ ಬರ್ಬೊಝಾ, ಜೋಕಿಂ ಕ್ರಾಸ್ತಾ, ಬೆಳ್ತಂಗಡಿಯ ಪ್ರಧಾನ ಕಛೇರಿಯ ವ್ಯವಸ್ಥಾಪಕ ವಾಲ್ಟರ್ ಡಿ’ಸೋಜಾ, ನಾರಾವಿ ಶಾಖಾ ವ್ಯವಸ್ಥಾಪಕಿ ಜೆರೋಮ್ ಡಿ’ಸೋಜಾ, ಅಳದಂಗಡಿ ಶಾಖಾ ವ್ಯವಸ್ಥಾಪಕಿ ಮಲ್ಲಿಕಾ ಮೋನಿಸ್ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಐವನ್ ಗೊನ್ಸಾಲ್ವಿಸ್, 25ನೇ ವರ್ಷಕ್ಕೆ ಪಾದಾರ್ಪಣೆಯ ಸಂಭ್ರಮದಲ್ಲಿರುವ ನಮ್ಮ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ 135ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದ್ದು, 46ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದೆ. ಎಂದರು. ನಿರ್ದೇಶಕ ಜೋಕಿಂ ಕ್ರಾಸ್ತಾ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಉಪಾಧ್ಯಕ್ಷ ಜ್ಹೋನ್ ಅರ್ವಿನ್ ಡಿ’ಸೋಜಾ ವಂದಿಸಿದರು.

Latest News

Related Posts