ಕೊರೋನಾ ನಡುವೆ ಹೆಲ್ಮೆಟ್ ಕೇಸ್

ಕೊರೋನಾ ನಡುವೆ ಹೆಲ್ಮೆಟ್  ಕೇಸ್
Facebook
Twitter
LinkedIn
WhatsApp

ಮೂಡುಬಿದಿರೆ: ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಜನತಾ ಲಾಕ್‌ಡೌನ್ ಘೋಷಿಸಿರುವ ಮಧ್ಯೆಯೂ, ಅತೀ ಅವಶ್ಯಕ ವಸ್ತುಗಳ ಖರೀದಿಗೆ ಜನರಿಗೆ ಮಧ್ಯಾಹ್ನದವರೆಗೆ ಅವಕಾಶ ಕಲ್ಪಿಸಿರುವ ಕಾರಣ ಮೂಡುಬಿದಿರೆಯಲ್ಲಿ ವಾಹನ ಸಂಚಾರ ಎಗ್ಗಿಲ್ಲದೆ ನಡೆಯುತ್ತಿದೆ.ದ್ವಿಚಕ್ರ, ತ್ರಿಚಕ್ರ ಮತ್ತು ಚತುಷ್ಚಕ್ರ ವಾಹನಗಳು ಭಾರೀ ಸಂಖ್ಯೆಯಲ್ಲಿ ಓಡಾಡುತ್ತಿದ್ದು, ಕೆಲವು ದ್ವಿಚಕ್ರ ವಾಹನಗಳ ಸವಾರರು ಹೆಲ್ಮೆಟ್ ಧರಿಸದೆ ಓಡಾಡಿದ ಪರಿಣಾಮವಾಗಿ ದಂಡ ತೆರಬೇಕಾದ ಸ್ಥಿತಿಯನ್ನು ಮೈಮೇಲೆಳೆದುಕೊಂಡಿದ್ದಾರೆ. ಮೇ 4ರಂದು ಮುಂಜಾನೆಯೇ ಹೆದ್ದಾರಿ ಗಸ್ತುದಳದ ಪೊಲೀಸರು ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆದು ದಂಡ ವಸೂಲಿ ಮಾಡಿದ್ದಾರೆ. ಇಲ್ಲೂ ಮಾನವೀಯತೆ ಮೆರೆದಿರುವ ಪೊಲೀಸರು ‘ಹೆಲ್ಮೆಟ್ ಇಲ್ಲದ್ದಕ್ಕೆ ದಂಡ ರೂಪಾಯಿ 500, ದೈಹಿಕ ಅಂತರಕ್ಕೆ ಬರೇ ನೂರು ರೂಪಾಯಿ ದಂಡ’ ಎಂದು ಹೇಳಿ ಪ್ರತಿಯೊಬ್ಬರಿಂದ ತಲಾ ರೂಪಾಯಿ 100ರಂತೆ ದಂಡ ವಸೂಲಿ ಮಾಡಿದ್ದಾರೆಂದು ತಿಳಿದು ಬಂದಿದೆ.

Latest News

Related Posts