ಕಳಿಯ ಗ್ರಾಮ ಪಂಚಾಯತ್: ಮಾವಿನಕಟ್ಟೆ ಜನತಾ ಕಾಲೊನಿ ಸೀಲ್ ಡೌನ್.

ಕಳಿಯ ಗ್ರಾಮ ಪಂಚಾಯತ್: ಮಾವಿನಕಟ್ಟೆ ಜನತಾ ಕಾಲೊನಿ ಸೀಲ್ ಡೌನ್.
Facebook
Twitter
LinkedIn
WhatsApp

ಬೆಳ್ತಂಗಡಿ: ಕಳಿಯ ಗ್ರಾಮ ಪಂಚಾಯತ್‌ನಲ್ಲಿ ಮೇ10 ರಂದು ಟಾಸ್ಕ್ ಫೋರ್ಸ್ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೇಶ್ಮೆರೋಡ್ ಮಾವಿನಕಟ್ಟೆ ಜನತಾ ಕಾಲೋನಿಯಲ್ಲಿ ಅತೀ ಹೆಚ್ಚು ಕೊರೋನಾ ಪಾಸಿಟಿವ್ ಇದ್ದು, ಈ ಪ್ರದೇಶವನ್ನು ಸೀಲ್ ಡೌನ್ ಮಾಡಲು ತೀಮಾ೯ನಿಸಲಾಯಿತು. ಜನಸಾಮಾನ್ಯರಿಗೆ ತುರ್ತು ಅವಶ್ಯಕತೆ ಇದ್ದರೆ ಹಾಗೂ ಅಗತ್ಯ ವಸ್ತುಗಳಿಗೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯನ್ನು ಹಾಗೂ ಸಿಬ್ಬಂದಿ ವರ್ಗವನ್ನು ಸಂಪರ್ಕಿಸುವಂತೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಯಿತು. ತುರ್ತು ಅವಶ್ಯಕತೆಗಳಿಗೆ ಸಂಘಸಂಸ್ಥೆಯವರು ಸೇವಾ ಮನೋಬಾವದಿಂದ ಸಹಕರಿಸುವುದಾದರೆ ನೇರವಾಗಿ ಗ್ರಾಮ ಪಂಚಾಯತ್ ಮೂಲಕವೇ ಸಹಕರಿಸಬೇಕು. ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನಗತ್ಯವಾಗಿ ವಾಹನಗಳ ಮೂಲಕ ತಿರುಗಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮ ಬೀಟ್ ಪೋಲಿಸರಿಗೆ ತಿಳಿಸಲಾಯಿತು. ಸಮಿತಿ ಸಭೆಯ ನಂತರ ಮಾವಿನಕಟ್ಟೆ ಪ್ರದೇಶಕ್ಕೆ ಬೇಟಿ ನೀಡಿ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಯಿತು. ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲವು ಪಾಸಿಟಿವ್ ಇದ್ದ ಮನೆಗಳಿಗೆ ಬೇಟಿ ನೀಡಿ ಮನೆಯವರ ಆರೋಗ್ಯ ವಿಚಾರಿಸಿ ದೈರ್ಯ ತುಂಬಲಾಯಿತು. ಹದಿನಾಲ್ಕು ದಿನಗಳ ಕಾಲ ಯಾರೂ ಮನೆಯಿಂದ ಹೊರಬಾರದೆಂದು ತಿಳಿಸಲಾಯಿತು.ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಭಾಶಿನಿ ಜನಾರ್ಧನ ಗೌಡ ಕೆ. ಉಪಾದ್ಯಕ್ಷೆ ಕುಸುಮ ಎನ್. ಬಂಗೇರ, ಸದಸ್ಯರಾದ ಸುದಾಕರ ಮಜಲು, ಕೆ. ಎಂ. ಅಬ್ದುಲ್ ಕರೀಮ್, ವಿಜಯ ಗೌಡ ಕೆ., ಲತೀಫ್ ಪರಿಮ, ಯಶೋದರ ಶೆಟ್ಟಿ, ಮೋಹಿನಿ, ಮರೀಟಾ ಪಿಂಟೋ, ಇಂದಿರಾ, ಪುಷ್ಪಾ ನಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್, ಗ್ರಾಮ ಬೀಟ್ ಪೋಲಿಸರಾದ ಹೆಡ್ ಕಾನ್ಸ್ಟೇಬಲ್ ವೆಂಕಪ್ಪ, ಕಾರ್ಯದರ್ಶಿ ಕುಂಞ ಕೆ., ಸಿಬ್ಬಂದಿಗಳಾದ ಸುರೇಶ್, ರವಿ ಎಚ್, ಸಾಮಾಜಿಕ ಧುರೀಣ ರಾಜೇಶ್ ಪೆಂರ್ಬುಡ ಉಪಸ್ಥಿತರಿದ್ದರು..

Latest News

Related Posts