ಬೆಳ್ತಂಗಡಿ: ಕುಂದಾಪುರದ ಗೋಪಾಲ ಬಂಗೇರ ಎಂಬವರು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಬ್ರಾಹ್ಮಣರು, ಪುರೋಹಿತರು ಮತ್ತು ಜನಿವಾರದ ಬಗ್ಗೆ ಅವಹೇಳನದ ಮಾತುಗಳನ್ನಾಡಿರುವುದು ತೀರಾ ಖಂಡನೀಯ. ಬ್ರಾಹ್ಮಣ ಸಮಾಜ ಮತ್ತು ವರ್ಗವನ್ನು ಈ ರೀತಿ ಪದೇಪದೇ ತೇಜೋವಧೆ ಮಾಡುವ ಕೃತ್ಯ ಇಲ್ಲಿಗೇ ಮುಗಿಯಬೇಕು. ಮುಂದೆ ಇಂತಹ ಅವಹೇಳನ ಹಾಗೂ ಬ್ರಾಹ್ಮಣ ಸಮಾಜದ ತೇಜೋವಧೆ ಮಾಡಿದಲ್ಲಿ ಇಡೀ ಬ್ರಾಹ್ಮಣ ಸಮಾಜ ಉಗ್ರ ಪ್ರತಿಭಟನೆಗೆ ಮುಂದಾಗಲಿದೆ ಎಂದು ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ(ರಿ) ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಮತ್ತು ತಾಲೂಕಿನ ವಿವಿಧ ವಲಯಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಘಟನೆಯನ್ನು ತೀವ್ರವಾಗಿ ಖಂಡಿಸಿ ಗೋಪಾಲ ಬಂಗೇರ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.





