ಕಳಿಯ ಸೊಸೈಟಿಯಿಂದ ಮಾದರಿ ಕಾರ್ಯ;ಸೀಲ್‌ಡೌನ್ ಪ್ರದೇಶದಲ್ಲಿ ರೇಷನ್ ಮನೆಬಾಗಿಲಿಗೆ.

ಕಳಿಯ ಸೊಸೈಟಿಯಿಂದ ಮಾದರಿ ಕಾರ್ಯ;ಸೀಲ್‌ಡೌನ್ ಪ್ರದೇಶದಲ್ಲಿ ರೇಷನ್ ಮನೆಬಾಗಿಲಿಗೆ.
Facebook
Twitter
LinkedIn
WhatsApp

ಬೆಳ್ತಂಗಡಿ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ರೇಶ್ಮೆರೋಡ್ ಮಾವಿನಕಟ್ಟೆ ಪ್ರದೇಶವವನ್ನು ಕೊರೋನಾ ಕಾರಣಕ್ಕೆ ಸೀಲ್‌ಡೌನ್ ಮಾಡಲಾಗಿದ್ದು, ಗೇರುಕಟ್ಟೆಯ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದವರು ಲಾಕ್‌ಡೌನ್ ಆದ ಆ ಪ್ರದೇಶದ ನಿವಾಸಿಗರಿಗೆ ತಿಂಗಳ ಪಡಿತರವನ್ನು ಅವರವರ ಮನೆಗಳಿಗೆ ತಲುಪಿಸಿ ವಿತರಿಸಿ ಮಾದರಿಯಾಗಿದ್ದಾರೆ. ಮಾವಿನಕಟ್ಟೆ ಪ್ರದೇಶದಲ್ಲಿ ಸಾಕಷ್ಟು ಕೊರೋನಾ ಪ್ರಕರಣವಿದ್ದು, ಈ ಪ್ರದೇಶವನ್ನು ಮುಂಜಾಗ್ರತಾ ಕ್ರಮವಾಗಿ ಸೀಲ್‌ಡೌನ್ ಮಾಡಲಾಗಿತ್ತು. ಇಲ್ಲಿನ ಜನತೆಗೆ ಪಡಿತರ ತೆಗೆದುಕೊಳ್ಳಲು ಅಸಾಧ್ಯವಾದ ಕಾರಣ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತದೊಂದಿಗೆ ಸಮಾನ ಮನಸ್ಕ ತಂಡದ ಯುವಕರು ಮಾತುಕತೆ ನಡೆಸಿ, ಪಡಿತರವನ್ನು ಆ ಭಾಗದಲ್ಲೇ ವಿತರಿಸುವಂತೆ ವಿನಂತಿಸಿಕೊಂಡಿದ್ದರು. ಯುವಕರ ಮನವಿಗೆ ಸ್ಪಂದಿಸಿದ ಸೊಸೈಟಿಯ ಅಧ್ಯಕ್ಷ ವಸಂತ ಮಜಲು ಹಾಗೂ ಆಡಳಿತ ಮಂಡಳಿಯವರು ಮೇ 13ರಂದುಮಾವಿನಕಟ್ಟೆ ಪ್ರದೇಶದಲ್ಲಿರುವ 35 ಮನೆಗಳಿಗೆ ಪಡಿತರವನ್ನು ತಲುಪಿಸಿದ್ದಾರೆ.ಪಡಿತರವನ್ನು ವಿತರಿಸುವಲ್ಲಿ ಸೊಸೈಟಿಯ ಆಡಳಿತ ಮಂಡಳಿ, ಸಿಬ್ಬಂದಿಗಳು, ಪಂಚಾಯಿತಿ ಆಡಳಿತ ಹಾಗೂ ಸದಸ್ಯರು, ಸಿಬ್ಬಂದಿಗಳು ಹಾಗೂ ಸ್ಥಳೀಯ ಪ್ರಮುಖರು ಸಹಕರಿಸಿದರು. ಪಡಿತರ ವಿತರಣೆ ಸಂದರ್ಭಕಳಿಯ ಪ್ರಾಥಮಿಕಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು, ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ ಕಲ್ಲಾಪು, ನಿರ್ದೇಶಕರಾದ ಶೇಖರ ನಾಯ್ಕ್, ರತ್ನಾಕರ ಪೂಜಾರಿ ಬಳ್ಳಿದಡ್ಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಶಂಕರ ಭಟ್, ಉಪನ್ಯಾಸಕ ಕೇಶವ ಬಂಗೇರ, ಸಾಮಾಜಿಕ ಕಾರ್ಯಕರ್ತ, ಮುಂದಾಳು ಕರುಣಾಕರ ಕೊರಂಜ, ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಮಜಲು, ವಿಜಯ ಗೌಡ ಕೆ., ಪ್ರಮುಖರಾದ ಸೋಮಪ್ಪ ಗೌಡ, ದಿನೇಶ್ ಪೂಜಾರಿ ಗೋವಿಂದೂರು, ಕೃಷಿಕ ಪವನ್ ಕುಮಾರ್, ಸೊಸೈಟಿಯ ಪಡಿತರ ವಿತರಕ ಸಿಬ್ಬಂದಿಗಳಾದ ಕೇಶವ ಶೆಟ್ಟಿ ಹಾಗೂ ನವೀನ್ ಕುಮಾರ್, ಕಳಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಕಾರ್ಯದರ್ಶಿ ಕುಂಞ ಕೆ., ಸಿಬ್ಬಂದಿಗಳಾದ ರವಿ ಎಚ್., ಸುರೇಶ್, ಸ್ಥಳೀಯರಾದ ರಾಜೇಶ್, ಅವಿನಾಶ್ ಮತ್ತಿತ್ತರರು ಹಾಜರಿದ್ದು ಸಹಕರಿಸಿದರು.

Latest News

Related Posts