ಬೆಳ್ತಂಗಡಿ: ಇತ್ತೀಚೆಗೆ ಕೊರೊನಾದಿಂದಾಗಿ ಭಾರೀ ಸದ್ದು ಮಾಡಿರುವ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುಧೆಮುಗೇರು ಪರಿಶಿಷ್ಟ ಜಾತಿ ಕಾಲೋನಿನಲ್ಲಿ ಹಲವಾರು ಜನರು ಕೊರೊನಾ ಬಾದಿತರಾಗಿಈ ಪ್ರದೇಶವನ್ನು ಕೆಲವು ದಿನಗಳಿಂದ ಕಂಟೋನ್ಮೆಂಟ್ ವಲಯ ಎಂಬುದಾಗಿ ಘೋಷಣೆ ಮಾಡಲಾಗಿದೆ. ಇದರಿಂದ ಇಲ್ಲಿನ ಜನರಿಗೆ ಮನೆಯಿಂದ ಹೊರಗಡೆ ಬಾರದಂತೆ ನಗರ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದಾರೆ.ಪರಿಣಾಮವಾಗಿ ಕೂಲಿ ಕೆಲಸವನ್ನೇ ನಂಬಿ ಬದುಕುತ್ತಿದ್ದ ಇಲ್ಲಿನ ನಿವಾಸಿಗಳಿಗೆ ಬದುಕು ಸಾಗಿಸುವರೇ ಕಷ್ಟವಾಗುತ್ತಿದೆ.ಒಂದೆಡೆ ಸೀಲ್ ಡೌನ್ ಘೋಷಣೆ ಮಾಡಿದ ಪಟ್ಟಣ ಪಂಚಾಯತ್ ಆಗಲೀ, ತಾಲೂಕು ಆಡಳಿತದ ವತಿಯಿಂದಾಗಲಿ ಯಾವುದೇ ರೀತಿಯ ದಿನನಿತ್ಯದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡದೇ ಇರುವುದನ್ನು ಮನಗಂಡು ಇಲ್ಲಿನ ಜನರ ಸಂಕಷ್ಟವನ್ನು ಅರ್ಥೈಸಿಕೊಂಡ ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಡಿ., ಸ್ಥಳೀಯ ದಾನಿಗಳನ್ನು ಭೇಟಿಮಾಡಿ ಕಂಟೋನ್ಮೆಂಟ್ ವಲಯದ ಜನರಿಗೆ ಸಹಕಾರ ನೀಡುವಂತೆ ಮನವಿ ಮಾಡಿರುವ ಮೇರೆಗೆ ಬೆಳ್ತಂಗಡಿ ಉದಯನಗರ ಪರಿಸರದ ನಿವಾಸಿಗರಾದಎ. ಜೆ. ಅಜೇಯ್ ಮಟ್ಲ,ಏಸುದಾಸ್ ಆನ್‌ಸಿಲ್ಕ್ ಬೆಳ್ತಂಗಡಿ, ಕರಾವಳಿ ಚಿಕನ್ ಮಾಲಕರಾದ ಥೋಮಸ್,ಪ್ರಜೇಶ್ ವಿ. ಎಫ್. ಮಸ್ಕತ್ , ಪೋಳಿ ಜೋಸೆಫ್ ಸೌದಿಅರೇಬಿಯಾ,ಅಖಿಲೇಶ್ ಕುವೈಟ್,ಬಿನೀಶ್ ಜೋಸೆಫ್ ಆಫ್ರಿಕಾ,ಶ್ಯಾಮ್ ವೆಲ್ ಕಾಶಿಬೆಟ್ಟು ಕೆನಡಾ, ಮತ್ತಿತರರು ಸಹಕರಿಸಿ, ಮೇ 13ರಂದು ಸಂಜೆ 4ಗಂಟೆಗೆ ಸುಧೆಮುಗೇರು ಕಾಲನಿಯ ನಿವಾಸಿಗರಿಗೆ ಅಕ್ಕಿ ಹಾಗೂ ಇತರ ದಿನಸಿ ಸಾಮಾಗ್ರಿಗಳ ಆಹಾರದ ಕಿಟ್ ಗಳನ್ನು ವಿತರಿಸಿದರು.ಈ ಸಂಧರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಮುಖಂಡರು ಹಾಗೂ ಕಾಂಗ್ರೆಸ್ ಪರಿಶಿಷ್ಟ ಜಾತಿ ತಾಲೂಕು ಘಟಕದ ಅಧ್ಯಕ್ಷ ಬಿ. ಕೆ. ವಸಂತ್, ದಲಿತ ಮುಖಂಡರುಗಳಾದ ಜನಾರ್ದನ ಸುಧೆಮುಗೇರು,ಉಮೇಶ್ ಮೆಸ್ಕಾಂ, ಸುರೇಶ್ ಸುಧೆಮುಗೇರು, ಲಿಂಗಪ್ಪ ಸುಧೆಮುಗೇರು, ರಾಜೇಶ್ ಸುಧೆಮುಗೇರು, ಅಶೋಕ್ ಸುಧೆಮುಗೇರು, ನೀಲಯ್ಯ ಸುಧೆಮುಗೇರು, ಕಿಶೋರ್ ಕೋಡಿಸಭೆ ಮುಂತಾದವರು ಉಪಸ್ಥಿತರಿದ್ದುಆಹಾರ ಸಾಮಾಗ್ರಿಗಳ ವಿತರಣೆಯಲ್ಲಿ ಸಹಕಾರ ನೀಡಿದರು.ಈ ಸಂಧರ್ಭದಲ್ಲಿ ಕೊಡುಗೈ ದಾನಿಗಳಿಗೆ ಪಟ್ಟಣ ಪಂಚಾಯತ್ ಸದಸ್ಯ ಜಗದೀಶ್ ಡಿ.ಯವರು ಧನ್ಯವಾದ ಸಲ್ಲಿಸಿದರು.







