ಮಾಜಿ ಪ್ರಧಾನಿ ರಾಜೀವ್ ಗಾಂಧಿ 30ನೇ ಪುಣ್ಯಸ್ಮೃತಿ ಮಾಸ್ಕ್ ಸರಿಸಿ ಭಾಗವಹಿಸಿದ ಹಿರಿಯ ನಾಯಕರುಫೊಟೊ ಬೆಳ್ತಂಗಡಿ: ಅಧುನಿಕ ಭಾರತದ ನಿರ್ಮಾತೃ, ಡಿಜಿಟಲ್ ಕ್ರಾಂತಿಯ ಮೂಲಕ ದೇಶದ ಪ್ರಗತಿಗೆ ಮುನ್ನುಡಿ ಬರೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿರವರ 30ನೇ ವರ್ಷದ ಪುಣ್ಯಸ್ಮೃತಿ ಕಾರ್ಯಕ್ರಮವು ಮೇ 21ರಂದು ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಹೊರಗಡೆ ನಡೆಯಿತು. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಸ್ಮರಣೆಯಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊರೊನ ಸೋಂಕಿನ ನಿಯಂತ್ರಣಕ್ಕೆ ಪೂರಕವಾದ ಅಗತ್ಯ ವೈದ್ಯಕೀಯ ಸೌಲಭ್ಯ, ಔಷಧಿ ಸಾಮಾಗ್ರಿಗಳನ್ನು ಮತ್ತು ಒಳರೋಗಿಗಳಿಗೆ ಹಣ್ಣುಹಂಪಲುಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕಾಂಗ್ರೇಸ್ ಪಕ್ಷದ ಬಹುತೇಕ ಪ್ರಮುಖರು ಮಾಸ್ಕ್ ಧರಿಸಿ, ಸಾಧ್ಯವಾದಷ್ಟು ವೈಯಕ್ತಿಕ ಅಂತರ ಪಾಲಿಸಿ ಭಾಗವಹಿಸಿದ್ದರು. ಆದರೆ ಫೊಟೊಗೆ ಪೋಸ್ ಕೊಡುವ ಭರದಲ್ಲಿ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಆವರಣದಲ್ಲಿಯೇ ವಿಧಾನ ಪರಿಷತ್ ಶಾಸಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹಾಗೂ ಮಾಜಿ ಶಾಸಕ ವಸಂತ ಬಂಗೇರ ತಮ್ಮ ವಯೋ ಹಿರಿತನವನ್ನೂ ಮರೆತು ಮಾಸ್ಕನ್ನು ಗಲ್ಲದ ಕೆಳಗೆ ಸರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅವರೀರ್ವರ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದ್ದಂತೂ ಸುಳ್ಳಲ್ಲ. ಈ ಸೇವಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ರಂಜನ್ ಜಿ. ಗೌಡ, ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯರಾದ ಜಗದೀಶ್ ಡಿ ಹಾಗೂ ಜನಾರ್ದನ, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ಯುವ ಕಾಂಗ್ರೆಸ್ ಮುಖಂಡ ಅಭಿನಂದನ್ ಹರೀಶ್, ಕಾಂಗ್ರಸ್ ಪರಿಶಿಷ್ಟ ಜಾತಿ ಘಟಕದ ಬೆಳ್ತಂಗಡಿ ತಾಲೂಕಿ ಅಧ್ಯಕ್ಷ ಬಿ. ಕೆ. ವಸಂತ್, ಸಾಮಾಜಿಕ ಜಾಲತಾಣ ಅಧ್ಯಕ್ಷ ಸಂದೀಪ್ ಎಸ್. ನೀರಲ್ಕೆ ಅರ್ವ, ನಗರ ಪಂಚಾಯತ್ನ ನಾಮನಿರ್ದೇಶಿತ ಮಾಜಿ ಸದಸ್ಯ ಮಹಬೂಬ್, ಪ್ರಭಾಕರ್ ಶಾಂತಿಕೋಡಿ, ಅಜಯ್ ಮಟ್ಲ, ಸತೀಶ್ ಶೆಟ್ಟಿ ಜೈನ್ ಪೇಟೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.






