ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊರೋನಾ ಹಾಟ್‌ಸ್ಪಾಟ್ ಪ್ರದೇಶಗಳಲ್ಲೊಂದಾದ ಸೀಲ್ ಡೌನ್ ಆಗಿರುವ ಪ್ರದೇಶ ಸುಧೇಮುಗೇರು ಕಾಲನಿಯ 25 ಮನೆಗಳಿಗೆ ಬೆಳ್ತಂಗಡಿ ಬಿಷಪ್‌ಹೌಸ್‌ನಿಂದ ಮೇ 22ರಂದು ಆಹಾರ ಕಿಟ್ ವಿತರಿಸಲಾಯಿತು.ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಡಾ. ಲಾರೆನ್ಸ್ ಮುಕ್ಕುಯಿ ಅವರ ಮಾರ್ಗದರ್ಶನದಲ್ಲಿ ಇಲ್ಲಿನ 24 ಮನೆಗಳಿಗೆ ಹಾಗೂ ಈ ಭಾಗದ ಓರ್ವ ಪೌರ ಕಾರ್ಮಿಕ ಸೇರಿ ಒಟ್ಟು 25 ಮನೆಗಳಿಗೆ ತಲಾ 10ಕಿಲೋ ಅಕ್ಕಿ, 6ತೆಂಗಿನಕಾಯಿ ಹಾಗೂ ದಿನಬಳಕೆ ಸಾಮಾಗ್ರಿಯನ್ನು ವಿತರಿಸಲಾಯಿತು. ಈ ಸಂದರ್ಭ ಬಿಷಪ್ ಹೌಸ್ ಪ್ರತಿನಿಧಿಗಳಾದ ವಂದನೀಯ ಅಬ್ರಾಹಂ ಪಟ್ಟೆರಿಲ್, ವಂದನೀಯ ಲಾರೆನ್ಸ್ ಪಿ. ವಿ., ವಂದನೀಯ ಬಿನೋಯ್ ಎ. ಜೆ., ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯಿತ್ ಸದಸ್ಯ ಜಗದೀಶ್ ಡಿ, ಸ್ಥಳೀಯರಾದ ಅಜಯ್ ಎ.ಜೆ., ಕಿಶೋರ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.






