ಮೂಡುಬಿದಿರೆ : ಕಾಂಗ್ರೆಸ್ ಯುವನಾಯಕ ಮಿಥುನ್ ರೈಯವರು ಕೋವಿಡ್ ಸಂದರ್ಭದಲ್ಲಿ ಕೊಡುಗೆಯಾಗಿ ನೀಡಿರುವ ಉಪಯುಕ್ತ ಔಷಧಿ, ಮಾಹಿತಿ, ವಿಟಮಿನ್ ಮಾತ್ರೆಗಳು ಮತ್ತು ಮಾಸ್ಕನ್ನು ಒಳಗೊಂಡ 1500 ಐಸೊಲೇಷನ್ ಕಿಟ್ ಗಳನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನೇತ್ರತ್ವದಲ್ಲಿ ಮೂಡುಬಿದಿರೆಯ ಆಶಾ ಕಾರ್ಯಕರ್ತೆಯರು, ಆಟೋರಿಕ್ಷಾ ಚಾಲಕರು ಮತ್ತಿತರರಿಗೆ ವಿತರಿಸಲಾಯಿತು.ಸರಕಾರ ವಿಧಿಸಿರುವ ಕೋವಿಡ್ ನಿಯಮಗಳ ಪಾಲನೆಯೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪ್ರಧಾನ ಕಾರ್ಯದರ್ಶಿ ರತ್ನಾಕರ ಸಿ. ಮೊಯ್ಲಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ಚಂದ್ರಹಾಸ ಸಾಧು ಸನಿಲ್, ಪುರಸಭಾ ಸದಸ್ಯರುಗಳಾದ ಕೊರಗಪ್ಪ, ಸುರೇಶ್ ಕೋಟ್ಯಾನ್, ಜೊಸ್ಸಿ ಮಿನೇಜಸ್, ಪುರಂಧರ ದೇವಾಡಿಗ, ಸುರೇಶ್ ಪ್ರಭು, ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನಾಯಕರುಗಳಾದ ಸಂತೋಷ್ ಶೆಟ್ಟಿ, ಅರಣ್ ಕುಮಾರ್ ಶೆಟ್ಟಿ, ಮುರಳೀಧರ ಕೋಟ್ಯಾನ್, ಪುರುಷೋತ್ತಮ ನಾಯಕ್, ಸುರೇಶ್ ಪೂಜಾರಿ ಗೋಳಾರ, ಕ್ಲಾರಿಯೊ ಡಿಸೋಜ, ಸುಚಿನ್ ಮಡಿವಾಳ, ಶಹಬಾಜ್ ಅಹ್ಮದ್ ಬೆಳುವಾಯಿ, ಶಿವಶಂಕರ, ಕಿರಣ್ ಮಾಸ್ಟರ್, ಗಣೇಶ್, ಮಹಮ್ಮದ್ ನಿಶಾಮ್, ರಿಯಾನ್, ಲತೀಫ್ ಮತ್ತಿತರರು ಐಸೊಲೇಷನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






