ಬೆಳುವಾಯಿಯಲ್ಲಿ ಹೋಂ ಐಸೊಲೇಷನ್ ಕಿಟ್ ವಿತರಣೆ

ಬೆಳುವಾಯಿಯಲ್ಲಿ ಹೋಂ ಐಸೊಲೇಷನ್ ಕಿಟ್ ವಿತರಣೆ
Facebook
Twitter
LinkedIn
WhatsApp

ಮೂಡುಬಿದಿರೆ: ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಹಾಗೂ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಅವರ ನೇತ್ರತ್ವದಲ್ಲಿ ಕೊರೋನಾ ವೈರಸ್‌ನಿಂದ ಜನತೆಯನ್ನು ರಕ್ಷಿಸುವ ಉದ್ದೇಶದಿಂದ ಮಿಥುನ್ ರೈ ಅವರು ಕೊಡುಗೆಯಾಗಿ ನೀಡಿರುವ ಹೋಮ್ ಐಸೊಲೇಷನ್ ಕಿಟ್‌ಅನ್ನು ಇಂದು ಬೆಳುವಾಯಿ ಗ್ರಾಮದಲ್ಲಿ ಆಶಾ ಕಾರ್ಯ ಕರ್ತರಿಗೆ, ಆಟೋ ರಿಕ್ಷಾ ಚಾಲಕರಿಗೆ , ಪೆಟ್ರೊಲ್ ಪಂಪ್ ಸಿಬ್ಬಂದಿಗಳಿಗೆ ವಿತರಿಸಲಾಯಿತು.ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ನಾಯಕರಾದ ಚಂದ್ರಹಾಸ್ ಸನಿಲ್, ಸುರೇಶ್ ಕೋಟ್ಯಾನ್, ವಕ್ತಾರರಾದ ರಾಜೇಶ್ ಕಡಲಕೆರೆ, ಸಾಮಾಜಿಕ ಜಾಲತಾಣದ ಅಧ್ಯಕ್ಷ ನಿತಿನ್ ಬೆಳುವಾಯಿ, ಸಂತೋಷ್ ಶೆಟ್ಟಿ, ಶಾಹಬಾಜ್ ಅಹಮ್ಮದ್, ಕಿರಣ್ ಕುಮಾರ್, ರಾಘು ಪೂಜಾರಿ, ಸುರೇಶ್ ಕೆ. ಪೂಜಾರಿ, ಶೌಕತ್ ಅಲಿ, ಹೇಮಲತಾ, ಮಹೇಶ್ ಭಂಡಾರಿ, ಇಕ್ಬಾಲ್, ಮುಂತಾದವರು ಉಪಸ್ಥಿತರಿದ್ದರು.

Latest News

Related Posts