ಶಿರ್ತಾಡಿ: ಸೌಹಾರ್ದ ಫ್ರೆಂಡ್ಸ್ ಕ್ಲಬ್, ಶಿರ್ತಾಡಿ ಹಾಗೂ ರೋಟರಿ ಕ್ಲಬ್ ಮೂಡುಬಿದಿರೆ, ಇದರ ವತಿಯಿಂದ, ಶಿರ್ತಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, ಕೊರೋನ ಕಿಟ್ ಗೆ ಉಪಯೋಗಿಸುವ 3 ಆಕ್ಸಿಮೀಟರ್ ಗಳು, N95 ಮಾಸ್ಕ್ ಗಳು, ಸ್ಯಾನಿಟೈಸರ್ ಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಸೌಹಾರ್ದ ಫ಼್ರೆಂಡ್ಸ್ ಕ್ಲಬ್ ನ ಗೌರವಾಧ್ಯಕ್ಶರಾಗಿವ ಡಾ| ಆಶಿರ್ವಾದ್, ಅಧ್ಯಕ್ಶರಾದ ಪ್ರವೀಣ್ ಕುಮಾರ್, ರೋಟರಿ ಕ್ಲಬ್ ಮೂಡಬಿದಿರೆ ಇದರ ನಿಯೋಜಿತ ಅಧ್ಯಕ್ಶರಾದ ಜೆ. ಡಬ್ಲ್ಯೂ. ಪಿಂಟೊ, ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಶರಾದ ಸಂತೋಷ್ ಕೊಟ್ಯಾನ್, ಸೌಹಾರ್ದ ಫ್ರೆಂಡ್ಸ್ ಕ್ಲಬ್ ನ ಕಾರ್ಯದರ್ಶಿ ಚಿಂತನ್ ಲೋಬೊ, ಸೌಹಾರ್ದ ಫ಼್ರೆಂಡ್ಸ್ ಕ್ಲಬ್ ಸದಸ್ಯರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.






