ನೆಲ್ಲಿಕಾರು: ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೆಲ್ಲಿಕಾರು ಮತ್ತು ಮಾಂಟ್ರಾಡಿ ಗ್ರಾಮದ ಕೊರೊನ ಸೋಂಕಿಗೆ ಒಳಗಾದ ಬಡ ಕುಟುಂಬಗಳಿಗೆ ಗ್ರಾಮ ಪಂಚಾಯsತಿ ವತಿಯಿಂದ ದಿನ ನಿತ್ಯದ ಆಹಾರ ಪದಾರ್ಥಗಳ ಕಿಟ್ ಅನ್ನು ವಿತರಿಸಲಾಯಿತು ಮತ್ತು ಆರೋಗ್ಯ ವಿಚಾರಿಸಿ ಮನೋ ದೈರ್ಯ ತುಂಬಲಾಯಿತು.ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಶೀಲಾ ಉಪಾಧ್ಯಕ್ಷರಾದ ಶಶಿಧರ ಎಂ. ಪಂಚಾಯತ್ ಸದಸ್ಯರುಗಳಾದ ಅಣ್ಣಿ ಪೂಜಾರಿ , ಸುನಂದ , ಜಿನೇಂದ್ರ ಜೈನ್ ,ಆಶಾಲತ ಹಾಗೂ ಮೂಡಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ದಯಾವತಿ ಎಂ. ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಗ್ಗಪ್ಪ ಮೂಲ್ಯ ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಆಶಾ ಕಾರ್ಯಕರ್ತೆಯರಾದ ಪದ್ಮಲತ ಜೈನ್ ಶಾಲಿನಿ ಉಪಸ್ಥಿತರಿದ್ದರು.






