ಮೂಡುಬಿದಿರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಎರಡನೇ ಅವಧಿಯ ಎರಡನೆ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಂಭ್ರಮ ಆಚರಣೆ ಆಚರಿಸುವ ಬದಲಾಗಿ ಕಾರ್ಯಕರ್ತರು ತಮ್ಮ ಬೂತ್ ಗಳಲ್ಲಿ ಸೇವಾಕಾರ್ಯ ಮಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಜೆ.ಪಿ.ನಡ್ಡಾಜಿಯವರ ಹಾಗು ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರ ಸೂಚನೆಯಂತೆ ಬಿಜೆಪಿ ಜಿಲ್ಲಾದ್ಯಕ್ಷರಾದ ಸುದರ್ಶನ ಎಂ ರವರು ತಮ್ಮ ಬೂತ್ ನಲ್ಲಿ ಕೊವಿಡ್ ಪೀಡಿತರಿಗೆ ಆರ್ಥಿಕ ನೆರವು, ಮಾರಿಗುಡಿ ಅರ್ಚಕರಿಗೆ ಆಹಾರ ಸಾಮಗ್ರಿ ವಿತರಣೆ, ಹಾಗು ಸಸಿ ನೆಡುವ ಮೂಲಕ ಸೇವಾಕಾರ್ಯದಲ್ಲಿ ಪಾಲ್ಗೊಂಡರು. ಪುರಸಭಾ ವಾರ್ಡ್ ಸದಸ್ಯ ರಾಜೇಶ್ ನಾಯಕ್, ಬೂತ್ ಪ್ರಮುಖರಾದ ರಾಜೇಶ್ ಭಟ್, ಜಗದೀಶ, ರಾಹುಲ್, ರಾಜೇಶ್, ಶರತ್, ಕಿಶೋರ್, ಸದಾನಂದ, ಅನಿಲ್ ಉಪಸ್ಥಿತರಿದ್ದರು.






